ಕರ್ತವ್ಯ ನಿಷ್ಠೆ ಮತ್ತು ವೈಚಾರಿಕತೆ ಸ್ಪೂರ್ತಿದಾಯಕ-ಕುಲ ಸಚಿವ

ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾನಿಲಯದಲ್ಲಿ ಬುಧವಾರ ಶಿವಯೋಗಿ ಸಿದ್ಧರಾಮ ಜಯಂತಿ ಆಚರಣೆ ಮಾಡಲಾಯಿತು. ಕುಲಸಚಿವ ಡಾ.ಎ.ಚನ್ನಪ್ಪ , ಉಪಕುಲಸವ ಡಾ.ಕೆ.ವೆಂಕಟೇಶ್, ಕಾಲೇಜು ಅಭಿವೃದ್ಧಿ ಮಂಡಳಿ ನಿರ್ದೇಶಕ ಡಾ.ಸುಯಮೀಂದ್ರ ಕುಲಕರ್ಣಿ, ಡಾ.ಜಿ.ಎಸ್.ಬಿರಾದಾರ, ಡೀನ್ ಪ್ರೊ.ಪಾರ್ವತಿ.ಸಿ.ಎಸ್, ಡಾ.ಲತಾ.ಎಂ.ಎಸ್. ಇದ್ದರು.

Published on
ರಾಯಚೂರು ಶಿವಯೋಗಿ ಸಿದ್ಧರಾಮ ಅವರ ಕರ್ತವ್ಯ ನಿಷ್ಠೆ ಮತ್ತು ವೈಚಾರಿಕತೆ ಇಂದಿನ ವಿದ್ಯಾರ್ಥಿಗಳಿಗೆ ಮಾದರಿಯಾಗುವುದೆಂದು ವಾಲ್ಮೀಕಿ ವಿವಿಯ ಕುಲಸಚಿವ ಡಾ.ಎ.ಚನ್ನಪ್ಪ ಹೇಳಿದರು.
ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾನಿಲಯದಲ್ಲಿ ಬುಧವಾರ ಶಿವಯೋಗಿ ಸಿದ್ಧರಾಮ ಜಯಂತಿ ಅಂಗವಾಗಿ ಭಾವ ಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು. ಸೊನ್ನಲಿಗೆ ಶಿವಯೋಗಿ ಸಿದ್ಧರಾಮ ಅವರು 12 ನೇಯ ಶತಮಾನದ ಶರಣರಲ್ಲಿ ಒಬ್ಬರಾದ ಇವರು ಶ್ರೇಷ್ಠ ವಚನಕಾರರು ಇವರ ಅಂಕಿತನಾಮ ಕಪಿಲಸಿದ್ದ ಮಲ್ಲಿಕಾರ್ಜುನ. ಬಾಲ್ಯದಲ್ಲಿ ಇವರು ಶಿವಭಕ್ತಿಯಿಂದ ಪ್ರೇರಿತಗೊಂಡು ಸೊಲ್ಲಾಪುರದಲ್ಲಿ ಪಶುಪಕ್ಷಿಗಳಿಗೆ ಮತ್ತು ಸಾಮಾನ್ಯ ಜನರಿಗಾಗಿ ನೀರಿನ ವ್ಯವಸ್ಥೆಗಾಗಿ ಕೆರೆಕಟ್ಟೆ ಮತ್ತು ಅರವಟ್ಟಿಗೆಗಳು, ಜನರಲ್ಲಿ ದೈವ ಮತ್ತು ಭಕ್ತಿಭಾವ ಮೂಡಲು ಗುಡಿಗಳು, ನಿರ್ಮಾಣಮಾಡಿ ಕರ್ಮಯೋಗಿ ಎನಿಸಿಕೊಂಡವರು.
ಅಲ್ಲಮಪ್ರಭು ಹಾಗೂ ಬಸವಣ್ಣನವರ ನೇತೃತ್ವದಲ್ಲಿ ಅನುಭವ ಮಂಟಪದಲ್ಲಿ ಇಷ್ಟಲಿಂಗ ದೀಕ್ಷೆ ಪಡೆದು ಮಹಾಶಿವಯೋಗಿಯಾದ ಇವರು ವಚನ ಚಳುವಳಿಯಲ್ಲಿ ಬಹುಮುಖ್ಯ ಪಾತ್ರ ವಹಿಸಿ ತಮ್ಮ ವಚನಗಳ ಮೂಲಕ ಜನರಲ್ಲಿ ವೈಚಾರಿಕ ಪ್ರಜ್ಞೆ ಮೂಡಿಸಿದರು ಅವರ ವಚನಗಳ ಸಂದೇಶಗಳನ್ನು ಇಂದಿನ ಯುವಕರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಉಪಕುಲಸವ ಡಾ.ಕೆ.ವೆಂಕಟೇಶ್, ಕಾಲೇಜು ಅಭಿವೃದ್ಧಿ ಮಂಡಳಿ ನಿರ್ದೇಶಕ ಡಾ.ಸುಯಮೀಂದ್ರ ಕುಲಕರ್ಣಿ, ಡಾ.ಜಿ.ಎಸ್.ಬಿರಾದಾರ, ಡೀನ್ ಪ್ರೊ.ಪಾರ್ವತಿ.ಸಿ.ಎಸ್, ಡಾ.ಲತಾ.ಎಂ.ಎಸ್. ಸೇರಿ ಅನೇಕರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net