ಸಿಸಿ ರಸ್ತೆ ಪರಿಶೀಲಿಸಿದ ಲೋಕಾಯುಕ್ತ ಅಧಿಕಾರಿ

ಮಲ್ಲದಗುಡ್ಡ ಗ್ರಾಮದಲ್ಲಿ ಸಿಸಿ ರಸ್ತೆಯನ್ನು ಲೋಕಾಯುಕ್ತ ಅಧಿಕಾರಿ ತೇಜಸ್ ಭೇಟಿ ನೀಡಿ, ಪರಿಶೀಲಿಸಿದರು. ಪಿಡಬ್ಲ್ಯುಡಿ ಇಂಜಿನಿಯರ್ ಪೂಜಾ, ತಾಪಂ ಇಒ ಚಂದ್ರಶೇಖರ, ಎಡಿ ವೆಂಕಪ್ಪ ಕುರುಕುಂದ ಇದ್ದರು.
ಮಲ್ಲದಗುಡ್ಡ ಗ್ರಾಮದಲ್ಲಿ ಸಿಸಿ ರಸ್ತೆಯನ್ನು ಲೋಕಾಯುಕ್ತ ಅಧಿಕಾರಿ ತೇಜಸ್ ಭೇಟಿ ನೀಡಿ, ಪರಿಶೀಲಿಸಿದರು. ಪಿಡಬ್ಲ್ಯುಡಿ ಇಂಜಿನಿಯರ್ ಪೂಜಾ, ತಾಪಂ ಇಒ ಚಂದ್ರಶೇಖರ, ಎಡಿ ವೆಂಕಪ್ಪ ಕುರುಕುಂದ ಇದ್ದರು.
Published on
ಸಿಂಧನೂರು: ವಿರುಪಾಪುರ ಗ್ರಾಪಂ ವ್ಯಾಪ್ತಿಯ ಮಲ್ಲದಗುಡ್ಡ ಗ್ರಾಮದಲ್ಲಿ ಕೆಆರ್‌ಐಡಿಎಲ್‌ನಿಂದ ನಿರ್ಮಿಸಿದ ಸಿಸಿ ರಸ್ತೆಯನ್ನು ಲೋಕಾಯುಕ್ತ ಅಧಿಕಾರಿ ತೇಜಸ್ ಬುಧವಾರ ಭೇಟಿ ನೀಡಿ, ಪರಿಶೀಲಿಸಿದರು. 
2022ರಲ್ಲಿ ಕೆಆರ್‌ಐಡಿಎಲ್‌ನಿಂದ ಕೈಗೊಂಡಿದ್ದ ಸಿಸಿ ರಸ್ತೆಯಿಂದ ಶಾಲೆಗೆ ಮತ್ತು ಸಾರ್ವಜನಿಕರ ಮನೆಗೆ ನೀರು ನುಗ್ಗುತ್ತಿರುವುದರಿಂದ ತೊಂದರೆ ಅನುಭವಿಸುತ್ತಿರುವ ಬಗ್ಗೆ ಗ್ರಾಮದ ಬಸವರಾಜ ಎನ್ನುವರು ಲೋಕಾಯುಕ್ತಕ್ಕೆ ದೂರು ನೀಡಿದ್ದರು. 
ಹೀಗಾಗಿ ಲೋಕಾಯುಕ್ತ ಅಧಿಕಾರಿ ತೇಜಸ್ ಅವರು ಪಿಡಬ್ಲ್ಯುಡಿ ಇಂಜಿನಿಯರ್ ಪೂಜಾರೊಂದಿಗೆ ಭೇಟಿ ನೀಡಿ ಸ್ಥಳ ಪರಿಶೀಲಿಸಿದ್ದು, ವರದಿ ನೀಡುವುದಾಗಿ ತಿಳಿಸಿದರು. ತಾಪಂ ಇಒ ಚಂದ್ರಶೇಖರ, ಎಡಿ ವೆಂಕಪ್ಪ ಕುರುಕುಂದ, ಪಿಡಿಒಗಳಾದ ಶಂಕರಗೌಡ, ಹುಚ್ಚಪ್ಪ, ಪೂರ್ಣಿಮಾ ಇದ್ದರು.  
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net