ವಾಲ್ಮೀಕಿಯ ಮಾನವ ಕುಲ ತಾನೊಂದೇ ವಲಂ ಸಂದೇಶ, ಜೀವಕ್ಕೆ ಯಾವ ಕುಲ ಎನ್ನುವ ಕನಕದಾಸರ ನೀತಿ, ಸರ್ವರಿಗೂ ಸಮಬಾಳು ಸರ್ವರಿಗೂ ಸಮಪಾಲು ತತ್ತ6್ವ, ಸಮಾನತೆಯ ಕಲ್ಪನೆಯಡಿ ಸಂವಿಧಾನ ರಚಿಸಿದ ಡಾ.ಬಿ.ಆರ್.ಅಂಬೇಡ್ಕರ್ ಅವರಂತ ಅನೇಕ ಮಹನಿಯರ ಆಶಯ, ಸಂದೇಶ, ಮೌಲ್ಯಗಳನ್ನು ಕುವೆಂಪು ಅವರ ಬರೆಹದಲ್ಲಿ ಕಾಣಬಹುದಾಗಿದೆ. ಜೀವನ ಪ್ರೀತಿ ಹೊಂದು, ಸರ್ವರನ್ನೂ ಪ್ರೀತಿಸು ಎನ್ನುವ ಅನಿಕೇತನ ಸಂದೇಶದ ಕುವೆಂಪು ಅವರು ನೀಡಿದ ವಿಶ್ವಮಾನವ ಸಂದೇಶವು, ಸಂಕೀರ್ಣವಾಗುತ್ತಿರುವ ಇಂದಿನ ಸಮಾಜಕ್ಕೆ ಔಷಧಿಯಂತಿದೆಂದು ತಿಳಿಸಿದರು.