ಯುದ್ಧ ನಿಲ್ಲಿಸಿ ಶಾಂತಿ ಕಾಪಾಡಲಿ

ಸಿಂಧನೂರು ಗಾಂಧಿ ವೃತ್ತದಲ್ಲಿ ಸಿಪಿಐಎಂಎಲ್ ರೆಡ್ ಸ್ಟಾರ್, ಕರ್ನಾಟಕ ಕೃಷಿ ಕೂಲಿಕಾರರ ಸಂಘ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ, ದಲಿತ ವಿದ್ಯಾರ್ಥಿ ಪರಿಷತ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. ಸಿಪಿಐ(ಎಂಎಲ್)ರೆಡ್ ಸ್ಟಾರ್ ರಾಜ್ಯ ಸಮಿತಿ ಸದಸ್ಯ ಎಂ. ಗಂಗಾಧರ್, ಕರ್ನಾಟಕ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘದ ಅಧ್ಯಕ್ಷ ಅಪ್ಪಣ್ಣ ಕಾಂಬ್ಳೆ, ದಲಿತ ವಿದ್ಯಾರ್ಥಿ ಪರಿಷತ್(ಡಿವಿಪಿ)ನ ನರಸಪ್ಪ ಬಡಿಗೇರ್, ದುರುಗೇಶ ಕಲಮಂಗಿ, ಶಿವುಪುತ್ರ ಇತರರಿದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಕರ್ನಾಟಕ
  • ಕೃಷಿ ಕೂಲಿಕಾರರ ಸಂಘ
  • ಆಕ್ರೋಶ
ಸಿಂಧನೂರು: ಇರಾನ್ ಮೇಲೆ ಅಮೆರಿಕ ಇಸ್ರೇಲ್ ಮಿಲಿಟರಿ ದಾಳಿ ವಿರುದ್ಧ ಘೋಷಣೆ ಕೂಗಿ ನಗರದ ಗಾಂಧಿ ವೃತ್ತದಲ್ಲಿ ಸಿಪಿಐಎಂಎಲ್ ರೆಡ್ ಸ್ಟಾರ್, ಕರ್ನಾಟಕ ಕೃಷಿ ಕೂಲಿಕಾರರ ಸಂಘ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ, ದಲಿತ ವಿದ್ಯಾರ್ಥಿ ಪರಿಷತ್ ನೇತೃತ್ವದಲ್ಲಿ ಪ್ರತಿಭಟನೆ ಮಾಡಲಾಯಿತು.
ಇರಾನ್ ಮೇಲೆ ಅಮೆರಿಕಾ-ಇಸ್ರೇಲ್ ಸಾಮ್ರಾಜ್ಯವಾದಿ ಶಿಬಿರ ನಡೆಸುತ್ತಿರುವ ಯುದ್ಧದ ದಾಳಿ, ಪ್ರಚೋದನೆ ಮತ್ತು ಅಸ್ಥಿರಗೊಳಿಸುವ ಕಾರ್ಯಾಚರಣೆಗಳ ಮುಂದುವರಿಕೆಯಾಗಿದೆ. ಇರಾನ್ ಪರಮೋಚ್ಚನಾಯಕ ಅಯಾತೊಲ್ಲಾ ಅಲಿ ಖಮೇನಿ ಅವರನ್ನು ಹತ್ಯೆ ಮಾಡಿದ್ದು ಅತ್ಯಂತ ಗಂಭೀರ ಮತ್ತು ಅಪಾಯಕಾರಿ ಬೆಳವಣಿಗೆಯಾಗಿದೆ.
ಸಿಪಿಐಎಂಎಲ್ ರೆಡ್ ಸ್ಟಾರ್ ಹಾಗೂ ಪ್ರಗತಿಪರ ಸಂಘಟನೆಗಳು ಈ ರಾಜಕೀಯ ಹತ್ಯೆಯನ್ನು ಯಾವುದೇ ಗೊಂದಲವಿಲ್ಲದೆ, ತೀಕ್ಷ್ಣವಾಗಿ ಮತ್ತು ಕ್ರಾಂತಿಕಾರಿ ದೃಢತೆಯಿಂದ ಖಂಡಿಸುತ್ತದೆ. ಕೂಡಲೇ ಯುದ್ಧವನ್ನು ನಿಲ್ಲಿಸಿ ಶಾಂತಿ ಕಾಪಾಡಬೇಕು ಎಂದು ಒತ್ತಾಯಿಸಿದರು.
ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಬಸವರಾಜ ಗೋಡಿಹಾಳ, ಸಿಪಿಐಎಂಎಲ್ ಎಚ್‌ಆರ್ ಹೊಸಮನಿ, ಮುದಿಯಪ್ಪ ಎಚ್‌ಎನ್ ಕ್ಯಾಂಪ್, ಧರಗಯ್ಯ, ಸಂಗಪ್ಪ, ಹುಲುಗಪ್ಪ ಬಳ್ಳಾರಿ, ಎಂ. ನಿರಂಜನಕುಮಾರ್, ಎಂ.ಎಸ್ ರಾಜಶೇಖರ್, ಬಾಲಪ್ಪ, ಕರಿಯಮ್ಮ ವಿರುಪಾಪುರ, ರಂಗಮ್ಮ, ಶರಣಮ್ಮ, ದೇವಕೇಮ್ಮ, ಆಂಜನೇಯ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net