ಜಿಲ್ಲಾಡಳಿತ, ತಾಲೂಕು ಆಡಳಿತ ಜೋಳ ಖರೀದಿ ಕೇಂದ್ರ ತೆರೆದು, ನೋಂದಣಿ ಆರಂಭಿಸಬೇಕು. ಮಾಜಿ ಸಚಿವ ವೆಂಕಟರಾವ ನಾಡಗೌಡ ಅವರು ಕಳೆದ ವರ್ಷ ಆಹಾರ ಇಲಾಖೆ ಕಾರ್ಯದರ್ಶಿಯೊಂದಿಗೆ ಮಾತನಾಡಿದ ನಂತರ ಜೋಳ ಖರೀದಿಯಾಗಿತ್ತು. ಈಗ ರೈತರು ಬೆಳೆದ ಎಲ್ಲ ಜೋಳವನ್ನು ಸರ್ಕಾರ ಖರೀದಿ ಮಾಡಬೇಕು. ವಿಳಂಬ ಮಾಡಿದರೆ ಜೆಡಿಎಸ್‌ದಿಂದ ಹೋರಾಟ ಅನಿವಾರ್ಯವಾಗಲಿದೆ ಎಂದರು. ಜೆಡಿಎಸ್ ನಗರ ಘಟಕ ಅಧ್ಯಕ್ಷೆ ರವಿಕುಮಾರ ಪನ್ನೂರು, ಪ್ರಮುಖರಾದ ಡಿ.ಸತ್ಯನಾರಾಯಣ, ಅಶೋಕಗೌಡ ಗದ್ರಟಗಿ, ಕೆ.ಜಿಲಾನಿಪಾಷಾ, ಜಿ.ಎಸ್.ಸತ್ಯನಾರಾಯಣ, ವೆಂಕಟೇಶ ನಂಜಲದಿನ್ನಿ, ಎಸ್.ಪಿ.ಟೈಲರ್, ಆಸ್ೀ ಇತರರಿದ್ದರು.