ಬಹಿರಂಗ ಚರ್ಚೆಗೆ ಬರಲಿ

ಗೋವಿಂದ
ಗೋವಿಂದ
Published on
ದೇವದುರ್ಗ: ಶಾಸಕಿ ಕರೆಮ್ಮ ಜಿ.ನಾಯಕ ವಿರುದ್ಧ ಕಾಂಗ್ರೆಸ್ ನಾಯಕ ಶ್ರೀನಿವಾಸ್ ನಾಯಕ ಸುಳ್ಳು ಆರೋಪ ಮಾಡುವ ಬದಲು ಬಹಿರಂಗ ಚರ್ಚೆಗೆ ಬರಲಿ ಎಂದು ತಾಪಂ ಮಾಜಿ ಸದಸ್ಯ ಗೋವಿಂದರಾಜ್ ನಾಯಕ ಸವಾಲು ಹಾಕಿದರು.
ಪಟ್ಟಣದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಶ್ರೀನಿವಾಸ್ ನಾಯಕ ಹಲವು ವರ್ಷಗಳಿಂದ ತಾಲೂಕಿನಲ್ಲಿ ಮರಳುದಂಧೆ ನಡೆಸುತ್ತಿದ್ದಾರೆ. ಯಾವ ಪಕ್ಷದಲ್ಲಿ ಇದ್ದಾರೆ ಎನ್ನುವುದೇ ಜನರಿಗೆ ಗೊಂದಲವಿದೆ. ಬೆಂಗಳೂರಿನ ಬ್ಯಾಂಕ್‌ನಲ್ಲಿ ನೌಕರನಾಗಿದ್ದ ಶ್ರೀನಿವಾಸ್ ನಾಯಕ ರಾಯಚೂರಿನಲ್ಲಿ 20ಕೋಟಿ ವೆಚ್ಚದ ಬಂಗಲೆ ಕಟ್ಟಿದ್ದು ಹೇಗೆ?. ಹಿಂದೆ ಅರಕೇರಾ ಕೇಂದ್ರೀಕೃತ ಆಡಳಿತದಿಂದ ತಾಲೂಕಿನ ಜನರು ನೆಮ್ಮದಿ ಕಳೆದುಕೊಂಡಿದ್ದರು. ಕರೆಮ್ಮ ಶಾಸಕರಾದ ನಂತರ ತಾಲೂಕಿನಲ್ಲಿ ಶಾಂತಿ ನೆಲೆಸಿದೆ. ಶಾಸಕರ ಹೆಸರು ಕೆಡಿಸಲು ಸುಳ್ಳು ಆರೊಪ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ಜೆಡಿಎಸ್ ಮಹಿಳಾ ಘಟಕದ ತಾಲೂಕು ಅಧ್ಯಕ್ಷೆ ರೇಣುಕಾ ಮಯೂರಸ್ವಾಮಿ ಮಾತನಾಡಿ, ನನ್ನ ವಿರುದ್ಧ ಶ್ರೀನಿವಾಸ್ ನಾಯಕ ಆರೋಪ ಮಾಡಿದ್ದು ನೋವಾಗಿದೆ. ರೇಣುಕಮ್ಮ ಎನ್ನುವವರ ಮೇಲೆ ಕೇಸ್ ಇವೆ. ನನ್ನ ವಿರುದ್ಧ ಇಲ್ಲ. ರೇಣುಕಾ, ರೇಣುಕಮ್ಮ ಬೇರೆಬೇರೆ. ಆರೋಪ ಮಾಡುವ ಮುನ್ನ ಮಾಹಿತಿ ತಿಳಿದು ಮಾತನಾಡಬೇಕು. ಶ್ರೀನಿವಾಸ್ ನಾಯಕ ಬಹಿರಂಗ ಕ್ಷಮೆ ಕೇಳಬೇಕು. ಇಲ್ಲದಿದ್ದರೆ ಮಾನನಷ್ಟ ಮೊಕದ್ದಮೆ ಹಾಕುತ್ತೇನೆ ಎಂದು ಎಚ್ಚರಿಸಿದರು. ವಕೀಲ ಹನುಮಂತ್ರಾಯ ಚಿಂತಲಕುಂಟಾ, ರಮೇಶ ರಾಮನಾಳ, ಮಯೂರಸ್ವಾಮಿ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net