ಮೈಸೂರಿನ ಶಿವಾನಂದಪುರಿ ಸ್ವಾಮೀಜಿ, ಆಗತೀರ್ಥದ ರೇವಣಸಿದ್ಧೇಶ್ವರ ಶಾಂತಮಯ ಸ್ವಾಮೀಜಿ, ಮುಖಣಾಪುರದ ಸೋಮಲಿಂಗೇಶ್ವರ ಸ್ವಾಮೀಜಿ ಸಾನ್ನಿಧ್ಯವಹಿಸಿದ್ದರು. ಬುಡಕಟ್ಟು ಜನರ ಸಾಮಾಜಿಕ ಪರಿಸ್ಥಿತಿ ಕುರಿತು ಡಾ.ಮಲ್ಲಿಕಾರ್ಜುನ ಮಾನ್ಪಡೆ, ಹಾಲುಮತ ಬುಡಕಟ್ಟು ಮಹಾಕಾವ್ಯಗಳ ಕುರಿತು ಡಾ.ಶಾಂತಪ್ಪ ಡಂಬಳ ಉಪನ್ಯಾಸ ನೀಡಿದರು. ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಾಯಿತು. ಕೆಪಿಎಸ್ಸಿ ಮಾಜಿ ಸದಸ್ಯ ಎಚ್.ಡಿ.ಪಾಟೀಲ್, ವಿಜಯಪುರದ ಅಕ್ಕಮಹಾದೇವಿ ವಿವಿ ಕುಲಸಚಿವ ಬಸವರಾಜ ಲಕ್ಕಣ್ಣನವರ್, ಪ್ರಮುಖರಾದ ಭೀಮಣ್ಣ ಮೇಟಿ, ಬಸವರಾಜ ವಿಭೂತಿಹಳ್ಳಿ, ಎಚ್.ಬಿ.ಮಂಜಪ್ಪ, ಚಂದಪ್ಪ ಬುದ್ದಿನ್ನಿ, ಶರಣಯ್ಯ ಒಡೆಯರ್, ದಮ್ಮೂರು ಸೋಮಪ್ಪ ಇತರರಿದ್ದರು.