ವಾಸಕ್ಕೆ ಯೋಗ್ಯಭೂಮಿ ಮಂಜೂರು ಮಾಡಲಿ

ಲಿಂಗಸುಗೂರು ಸಹಾಯಕ ಆಯುಕ್ತ ಬಸವಣೆಪ್ಪ ಕಲಶೆಟ್ಟಿ ಅವರಿಗೆ ಕರವೇ ಸ್ವಾಭಿಮಾನಿ ಸೇನೆ ಕಾರ್ಯಕರ್ತರು ಮನವಿ ಸಲ್ಲಿಸಿದರು. ಪ್ರಮುಖರಾದ ಕರವೇ ಸ್ವಾಭಿಮಾನಿ ಸೇನೆ ಅಧ್ಯಕ್ಷ ಜಿಲಾನಿ ಪಾಷಾ, ಶೇಖ್ ಅಜ್ಮೀರ್, ರವಿಕುಮಾರ ಬರಗುಡಿ, ಅಜೀಜ್ ಪಾಷಾ, ಮಲ್ಲನಗೌಡ, ಮೋಹಶೀನ್ ಖಾನ್, ಎಸ್‌ಎ ಖಾದ್ರಿ ಇತರರಿದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ವಾಜಪೇಯಿ
  • ನಗರ
  • ವಸತಿ

ಲಿಂಗಸುಗೂರು: ವಾಜಪೇಯಿ ನಗರ ವಸತಿ ಯೋಜನೆಯ ಫಲಾನುಭವಿಗಳಿಗೆ ಯೋಗ್ಯ ಭೂಮಿ ಒದಗಿಸಿ, ನಿಜವಾದ ಫಲಾನುಭವಿಗಳನ್ನು ಗುರುತಿಸಿ ಆಯ್ಕೆ ಮಾಡಬೇಕು ಎಂದು ಒತ್ತಾಯಿಸಿ ಕರವೇ ಸ್ವಾಭಿಮಾನಿ ಸೇನೆ ಕಾರ್ಯಕರ್ತರು ಸೋಮವಾರ ಸಹಾಯಕ ಆಯುಕ್ತ ಬಸವಣೆಪ್ಪ ಕಲಶೆಟ್ಟಿ ಅವರಿಗೆ ಮನವಿಪತ್ರ ಸಲ್ಲಿಸಿದರು.

ನಿವೇಶನ ನೀಡಲು ಗುರುತಿಸಿದ ಸ.ನಂ.286ರ ಜಾಗವು ಯೋಗ್ಯವಾಗಿಲ್ಲ. ವಾಸಕ್ಕೆ ಯೋಗ್ಯಭೂಮಿ ಮಂಜೂರು ಮಾಡಬೇಕೆಂದು ಪುರಸಭೆ ಮುಖ್ಯಾಧಿಕಾರಿಗಳು 2023 ಡಿ.11ರಂದು ತಹಸೀಲ್ದಾರ್‌ಗೆ ಪತ್ರ ಬರೆದಿದ್ದರು. ಸದರಿ ಜಾಗವು ಕಲ್ಲು ಬಂಡೆಗಳಿಂದ ಕೂಡಿದ್ದು ರಸ್ತೆ, ಕುಡಿಯುವ ನೀರು, ವಿದ್ಯುತ್ ಸೇರಿದಂತೆ ಮೂಲ ಸೌಕರ್ಯವಿಲ್ಲದ ಜಾಗವಾಗಿದ್ದು ಬೇರೆ ಜಾಗ ಗುರುತಿಸಲು ಪತ್ರದಲ್ಲಿ ತಿಳಿಸಿದ್ದರು.
2ತಿಂಗಳಲ್ಲಿ ಯೋಗ್ಯಭೂಮಿ ಮಂಜೂರು ಮಾಡಿ ಅರ್ಹ ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಣೆ ಮಾಡದಿದ್ದಲ್ಲಿ ಸಹಾಯಕ ಆಯುಕ್ತರ ಕಚೇರಿ ಮುಂದೆ ಧರಣಿ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿ ಮನವಿಪತ್ರ ಸಲ್ಲಿಸಿದರು.
ಪ್ರಮುಖರಾದ ಜಮೀರ್ ಪಾಷಾ, ಜಲಾಲ, ಅಮೀರ್ ಬೇಗಂ, ನಿರ್ಮಲಾ, ಮೆಹರುನ್ನಿಸಾ, ಮೇಘಾ, ನೂರಜಾಹ, ರಜಿಯಾ, ಮಸ್ತಾನಬಿ, ಹಸೀನಾಬೇಗಂ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net