ದೇವದುರ್ಗ ತಾಲೂಕು ಬಂಡೆದೊಡ್ಡಿಯಲ್ಲಿ ಖಾತ್ರಿ ಕಾರ್ಮಿಕರ ಆರೋಗ್ಯ ತಪಾಸಣೆ ನಡೆಸಲಾಯಿತು. ವೈದ್ಯಾಧಿಕಾರಿ ಶಂಶುದ್ದೀನ್, ಐಇಸಿ ಸಂಯೋಜಕ ಅಮರೇಶ, ಆರೋಗ್ಯ ಇಲಾಖೆಯ ಪಂಪಾಪತಿ, ಬಸವರಾಜ್, ತಾಯಣ್ಣ, ರಾಚಪ್ಪ ಇತರರಿದ್ದರು.
ದೇವದುರ್ಗ: ಕೊಪ್ಪರ ಸಮೀಪದ ಬಂಡೆದೊಡ್ಡಿಯಲ್ಲಿ ಜಿಲ್ಲಾಡಳಿತ, ಜಿಪಂ ಹಾಗೂ ಜಿಲ್ಲಾ ಆರೋಗ್ಯ ಇಲಾಖೆಯಿಂದ ನರೇಗಾ ಕೂಲಿಕಾರರ ಆರೋಗ್ಯ ತಪಾಸಣೆ ಶಿಬಿರ ಗುರುವಾರ ನಡೆಯಿತು.
ಟಿಎಚ್‌ಒ ಡಾ.ಬನದೇಶ್ವರ ಮಾತನಾಡಿ, ಕೂಲಿಕಾರ್ಮಿಕರು ಆರೋಗ್ಯದ ಕಡೆ ವಿಶೇಷ ಕಾಳಜಿವಹಿಸಬೇಕು. ಇಂದು ಆರೋಗ್ಯವೇ ಸಂಪತ್ತು. ಹೀಗಾಗಿ ಕಾಲಕಾಲಕ್ಕೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು. ವೈದ್ಯರ ಸಲಹೆಗಳನ್ನು ತಪ್ಪದೆ ಪಾಲಿಸಬೇಕು. ಮಹಿಳೆಯರು ವೈಯಕ್ತಿಕ ಸ್ವಚ್ಛತೆ ಬಗ್ಗೆ ಕಾಳಜಿವಹಿಸಬೇಕು ಎಂದರು.
ವೈದ್ಯಾಧಿಕಾರಿ ಶಂಶುದ್ದೀನ್, ಐಇಸಿ ಸಂಯೋಜಕ ಅಮರೇಶ, ಆರೋಗ್ಯ ಇಲಾಖೆ ನೌಕರರಾದ ಪಂಪಾಪತಿ, ಬಸವರಾಜ್, ತಾಯಣ್ಣ, ರಾಚಪ್ಪ ಇತರರಿದ್ದರು.