ಕಾರ್ಮಿಕರು ಆರೋಗ್ಯದತ್ತ ಗಮನ ಹರಿಸಲಿ

ಚೀಕಲಪರ್ವಿ ಗ್ರಾಮದಲ್ಲಿ ಆಯೋಜಿಸಿದ್ದ ಆರೋಗ್ಯ ತಪಾಸಣೆ ಶಿಬಿರದಲ್ಲಿ ನರೇಗಾ ಕೂಲಿ ಕಾರ್ಮಿಕರಿಗೆ ವೈದ್ಯಾಧಿಕಾರಿ ಪಾಂಡುರಂಗ ಪರೀಕ್ಷಿಸಿದರು. ಈ ವೇಳೆ ಸಮುದಾಯ ಸುರಕ್ಷಾಧಿಕಾರಿ ಮಂಜುಳಾ, ಚಿದಾನಂದಪ್ಪ ಇತರರಿದ್ದರು.
ಚೀಕಲಪರ್ವಿ ಗ್ರಾಮದಲ್ಲಿ ಆಯೋಜಿಸಿದ್ದ ಆರೋಗ್ಯ ತಪಾಸಣೆ ಶಿಬಿರದಲ್ಲಿ ನರೇಗಾ ಕೂಲಿ ಕಾರ್ಮಿಕರಿಗೆ ವೈದ್ಯಾಧಿಕಾರಿ ಪಾಂಡುರಂಗ ಪರೀಕ್ಷಿಸಿದರು. ಈ ವೇಳೆ ಸಮುದಾಯ ಸುರಕ್ಷಾಧಿಕಾರಿ ಮಂಜುಳಾ, ಚಿದಾನಂದಪ್ಪ ಇತರರಿದ್ದರು.
Published on
ಮಾನ್ವಿ: ಕೂಲಿ ಕಾರ್ಮಿಕರು ಕೆಲಸದ ಜತೆಗೆ ಆರೋಗ್ಯದ ಕಡೆ ಹೆಚ್ಚು ಗಮನ ಹರಿಸಬೇಕು ಎಂದು ವೈದ್ಯಾಧಿಕಾರಿ ಪಾಂಡುರಂಗ ಹೇಳಿದರು.
ತಾಲೂಕಿನ ಚೀಕಲಪರ್ವಿ ಗ್ರಾಮದಲ್ಲಿ ಮಂಗಳವಾರ ತಾಪಂ, ಗ್ರಾಪಂ ಮದ್ಲಾಪುರ ಹಾಗೂ ಆರೋಗ್ಯ ಇಲಾಖೆ ಸಹಯೋಗದಲ್ಲಿ ನಾಲಾ ಹೂಳೆತ್ತುವ ಕಾಮಗಾರಿ ಸ್ಥಳದಲ್ಲಿ ನರೇಗಾ ಕೂಲಿ ಕಾರ್ಮಿಕರಿಗಾಗಿ ಅಯೋಜಿಸಿದ್ದ ಆರೋಗ್ಯ ಉಚಿತ ತಪಾಸಣೆ ಶಿಬಿರ ಉದ್ಘಾಟಿಸಿ ಮಾತನಾಡಿದರು. ಈಗ ತಾಪಮಾನ ಕುಸಿದು ಚಳಿ ಹೆಚ್ಚಿದ್ದು, ನಿತ್ಯ ಕಾಯಿಸಿದ ನೀರು ಕುಡಿಯಬೇಕು. ಜ್ವರ, ಕೆಮ್ಮು, ಕಫ, ನೆಗಡಿಯಂತಹ ಲಕ್ಷಣಗಳು ಕಂಡು ಬಂದಲ್ಲಿ ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯಬೇಕು ಎಂದು ತಿಳಿಸಿದರು.
ಐಇಸಿ ತಾಲೂಕು ಸಂಯೋಜಕ ಈರೇಶ ಮಾತನಾಡಿ, ನರೇಗಾ ಯೋಜನೆಯಡಿ ಗಂಡು ಮತ್ತು ಹೆಣ್ಣು ಮಕ್ಕಳಿಗೆ ಸಮಾನವಾಗಿ 370 ರೂ. ದಿನದ ಕೂಲಿ ನೀಡಲಾಗುತ್ತಿದೆ. ನಗರ ಪ್ರದೇಶಗಳಿಗೆ ದುಡಿಯಲು ಹೋಗುವುದನ್ನು ನಿಲ್ಲಿಸಬೇಕು. ಸ್ತ್ರೀ ಚೇತನ ಅಭಿಯಾನದಡಿ ಗ್ರಾಮೀಣ ಪ್ರದೇಶದ ಪ್ರತಿ ಅರ್ಹ ಕುಟುಂಬಕ್ಕೂ ಒಂದು ಅರ್ಥಿಕ ವರ್ಷದಲ್ಲಿ 100 ದಿನ ಕೆಲಸ ನೀಡಲಾಗುವುದು ಎಂದು ತಿಳಿಸಿದರು.
ನರೇಗಾ ಕೂಲಿ ಕಾರ್ಮಿಕರಿಗೆ ರಕ್ತದೊತ್ತಡ, ಮಧುಮೇಹ ಹಾಗೂ ಇತರ ಪರೀಕ್ಷೆ ನಡೆಸಲಾಯಿತು. ಸಮುದಾಯ ಸುರಕ್ಷಾಧಿಕಾರಿ ಮಂಜುಳಾ, ಆರೋಗ್ಯ ನಿರಕ್ಷಣಾಧಿಕಾರಿ ಚಿದಾನಂದಪ್ಪ, ಮಹಮ್ಮದ್‌ಸಾಬ್, ಫಾತಿಮಾ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net