ಮಾನ್ವಿ-ಸಿರವಾರ ಭಾಗಕ್ಕೆ ನೀರು ತಲುಪಿಸಲಿ

ಗುಗೆಬಾಳ ಹತ್ತಿರ ತುಂಗಭದ್ರಾ ಎಡದಂಡೆ ಮುಖ್ಯನಾಲೆ ಬೊಂಗಾ ಕಾಮಗಾರಿಯನ್ನು ಮಾಜಿ ಶಾಸಕ ರಾಜಾ ವೆಂಕಟಪ್ಪನಾಯಕ ವೀಕ್ಷಿಸಿದರು.
ಗುಗೆಬಾಳ ಹತ್ತಿರ ತುಂಗಭದ್ರಾ ಎಡದಂಡೆ ಮುಖ್ಯನಾಲೆ ಬೊಂಗಾ ಕಾಮಗಾರಿಯನ್ನು ಮಾಜಿ ಶಾಸಕ ರಾಜಾ ವೆಂಕಟಪ್ಪನಾಯಕ ವೀಕ್ಷಿಸಿದರು.
Published on

ಕವಿತಾಳ: ತುಂಗಭದ್ರಾ ಎಡದಂಡೆ ಮುಖ್ಯನಾಲೆ ಕೊನೆಯ ಪ್ರದೇಶವಾದ ಸಿರವಾರ ಮತ್ತು ಮಾನ್ವಿ ತಾಲೂಕಿಗೆ ಪೂರ್ಣ ಪ್ರಮಾಣದಲ್ಲಿ ನೀರು ಹರಿಸಬೇಕು ಎಂದು ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ ಹೇಳಿದರು.

ಗುಗೆಬಾಳ ಹತ್ತಿರ ನಾಲೆ ಬೊಂಗಾ ದುರಸ್ತಿ ಕಾಮಗಾರಿ ಪರಿಶೀಲಿಸಿ ಶನಿವಾರ ಮಾತನಾಡಿದರು. ರಾಜ್ಯ ಸರ್ಕಾರ ರೈತರ ಬಗ್ಗೆ ಕಾಳಜಿ ತೋರುತ್ತಿಲ್ಲ. ನಾಲೆಗಳ ದುರಸ್ತಿ ಮಾಡದಿರುವುದರಿಂದ ನಾಲೆಗಳು ಜಖಂಗೊಳ್ಳುತ್ತಿವೆ. ಮಳೆಯಿಲ್ಲದೆ ರೈತರು ತೀವ್ರ ಸಂಕಷ್ಟದಲ್ಲಿದ್ದಾರೆ. ಸರ್ಕಾರ ಐಸಿಸಿ ಸಭೆಯಲ್ಲಿ ತೆಗೆದುಕೊಂಡ ತೀರ್ಮಾನದಂತೆ ನಾಲೆಗೆ ನೀರು ಹರಿಸಬೇಕು. ಮುಖ್ಯವಾಗಿ ಸಿರವಾರ, ಮಾನ್ವಿ ತಾಲೂಕಿನ ರೈತರ ಭೂಮಿಗೆ ನೀರು ಸರಿಯಾಗಿ ತಲುಪುವಂತಾಗಬೇಕು. ಇಲ್ಲದಿದ್ದರೆ ರೈತರೊಂದಿಗೆ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪ್ರಮುಖರಾದ ಸಣ್ಣ ಕಿರಿಲಿಂಗಪ್ಪ, ಮುಸ್ತಫಾ ಒಂಟಿ, ಶರಣಗೌಡ ಗವಿಗಟ್ಟ, ರಾಜಶೇಖರ ತೊಪ್ಪಲದೊಡ್ಡಿ, ದಾನಪ್ಪ ಸಿರವಾರ, ಸುಗೂರಯ್ಯಸ್ವಾಮಿ, ಬಸನಗೌಡ ಬೆಟ್ಟದೂರು, ನೀರಾವರಿ ಇಲಾಖೆ ಅಧಿಕಾರಿ ಕೋದಂಡ ರಾಮಯ್ಯ ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net