ಎಡದಂಡೆ ನಾಲೆಗೆ ನೀರು ಹರಿಸಲಿ

ಸಿಂಧನೂರಿನ ಮಿನಿವಿಧಾನಸೌಧದ ಮುಂದೆ ಬಿಜೆಪಿಯಿಂದ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಮಾತನಾಡಿದರು.
ಸಿಂಧನೂರಿನ ಮಿನಿವಿಧಾನಸೌಧದ ಮುಂದೆ ಬಿಜೆಪಿಯಿಂದ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಮಾತನಾಡಿದರು.
Published on

ಸಿಂಧನೂರು: ರೈತರು ಬೆಳೆ ಬೆಳೆಯಲು ತುಂಗಭದ್ರಾ ಜಲಾಶಯದಿಂದ ಎಡದಂಡೆ ನಾಲೆಗೆ ಕೂಡಲೇ ನೀರು ಹರಿಸಬೇಕು. ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸಬೇಕೆಂದು ಒತ್ತಾಯಿಸಿ ಬಿಜೆಪಿಯಿಂದ ಸೋಮವಾರ ಪ್ರತಿಭಟನೆ ನಡೆಸಲಾಯಿತು.

ತಾಲೂಕಿನ ಟೇಲೆಂಡ್ ಭಾಗದಲ್ಲಿ ಜೂನ್‌ನಲ್ಲಿ ಬಂದಿದ್ದ ಅಲ್ಪ ಮಳೆಯಲ್ಲಿ ಬಿತ್ತನೆ ಮಾಡಿದ್ದ ಬೆಳೆಯೆಲ್ಲ ಒಣಗಿದ್ದು, ರೈತರು ಸಂಕಷ್ಟ ಎದುರಿಸುತ್ತಿದ್ದಾರೆ. ಜಲಾಶಯದ ಕ್ರಸ್ಟ್‌ಗೇಟ್ ದುರಸ್ತಿ ಹಿನ್ನೆಲೆಯಲ್ಲಿ ಬೇಸಿಗೆ ಬೆಳೆಗೆ ನೀರು ಇಲ್ಲದೆ ರೈತರು ಬೆಳೆ ಕಳೆದುಕೊಂಡಿದ್ದು, ಈಗ ಮಳೆ ಅಭಾವದಿಂದ ಭತ್ತದ ನಾಟಿಯಾಗಿಲ್ಲ. ನೀರಿನ ಕೊರತೆಯಿಂದ ಜಾನುವಾರುಗಳಿಗೂ ತೊಂದರೆಯಾಗಿದೆ ಎಂದು ದೂರಲಾಯಿತು.
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಜಲಾಶಯದಲ್ಲಿ ಕೇವಲ 35 ಟಿಎಂಸಿ ನೀರಿದ್ದರೂ, ನಾಲೆಗೆ ನೀರು ಹರಿಸಿ ರೈತರ ಬದುಕನ್ನು ಹಸನಗೊಳಿಸಲಾಗಿತ್ತು. ಇದರಿಂದಾಗಿ ಸರ್ಕಾರ ಎಡದಂಡೆ ನಾಲೆಗೆ ನೀರು ಹರಿಸಲು ಕ್ರಮವಹಿಸಬೇಕು. ಬೆಂಬಲ ಬೆಲೆ ಯೋಜನೆಯಡಿ ಖರೀದಿಸಿರುವ ಜೋಳದ ಬಾಕಿ ಹಣ ನೀಡಬೇಕು. ಬೆಳೆ ವಿಮೆಗೆ ಸರ್ಕಾರದಿಂದ ಶೀಘ್ರ ಅನುಮೋದನೆ ನೀಡಬೇಕು. ಪ್ರತಿ ಎಕರೆಗೆ ಸೂಕ್ತ ಪರಿಹಾರ ನೀಡಬೇಕು. ರೈತರ ಸಾಲಮನ್ನಾ ಮಾಡಬೇಕೆಂದು ಒತ್ತಾಯಿಸಲಾಯಿತು.
ಗ್ರಾಮೀಣ ಮಂಡಲ ಅಧ್ಯಕ್ಷ ವೆಂಕೋಬ ನಾಯಕ, ನಗರ ಮಂಡಲ ಅಧ್ಯಕ್ಷ ಸಿದ್ದರಾಮೇಶ ಮನ್ನಾಪುರ, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಎಂ.ದೊಡ್ಡಬಸವರಾಜ, ಮಧ್ವರಾಜ ಆಚಾರ್ಯ, ಲಿಂಗರಾಜ ಹೂಗಾರ, ಟಿ.ಸುಬ್ಬಾರಾವ, ದೊರಬಾಬು, ಬಸವರಾಜ ಬಂಗಾರಶೆಟ್ರ, ಮಲ್ಲೇಶ್ವರರಾವ, ಮಂಜುನಾಥಗೌಡ ರೌಡಕುಂದ, ಮಲ್ಲಿಕಾರ್ಜುನ ಹುಡಾ, ಫಕೀರಪ್ಪ ಹೆಡಗಿನಾಳ, ನರೇಶ, ವೆಂಕಣ್ಣ ತಿಪ್ಪನಹಟ್ಟಿ, ಮಮತಾ ಹಿರೇಮಠ, ಪ್ರೇಮಾ ಸಿದ್ದಾಂತಿಮಠ, ಸಹನಾ ಹಿರೇಮಠ, ಆದಿಲಕ್ಷ್ಮೀ, ವೀರರಾಜು ಬಂಗಾರಿಕ್ಯಾಂಪ್, ರವಿ ಉಪ್ಪಾರ, ಮುತ್ತು ಬರ್ಸಿ, ಸಿದ್ದು ಹೂಗಾರ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net