ರಾಯಚೂರು ಜಿಲ್ಲಾಧಿಕಾರಿ ಕಚೇರಿ ಮುಂದೆ ಎಸ್‌ಯುಸಿಐಸಿ ಪ್ರತಿಭಟನೆ ನಡೆಸಿತು. ಜಿಲ್ಲಾ ಸಮಿತಿ ಸದಸ್ಯರಾದ ವೀರೇಶ ಎನ್.ಎಸ್, ಚನ್ನಬಸವ ಜಾನೇಕಲ್, ಮಹೇಶ್ ಚಿಕ್ಕಲಪರವಿ, ಅಣ್ಣಪ್ಪ, ಬಸವರಾಜು, ಮಾರೆಪ್ಪ, ರೆಹಾನುದ್ದೀನ್, ಆದೆಪ್ಪ, ವೀರೇಶ್ ಜಕ್ಕಲದಿನ್ನಿ ಇತರರಿದ್ದರು.
ರಾಯಚೂರು: ವೃದ್ಧರು, ವಿಧವೆಯರು, ವಿಶೇಷ ಚೇತನರು, ಅವಿವಾಹಿತರು, ತೃತೀಯ ಲಿಂಗಿಗಳ ಪಿಂಚಣಿ ಐದು ತಿಂಗಳಿನಿಂದ ಸ್ಥಗಿತವಾಗಿದ್ದನ್ನು ಖಂಡಿಸಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಎಸ್‌ಯುಸಿಐಸಿ ಸಂಘಟನೆ ಶನಿವಾರ ಪ್ರತಿಭಟನೆ ನಡೆಸಿತು.
ರಾಜ್ಯದ ಸುಮಾರು 18ಲಕ್ಷ ಫಲಾನುಭವಿಗಳು ಸಂಶಯಾಸ್ಪದ ಎಂದು ಸರ್ಕಾರ ತೀರ್ಮಾನಿಸಿದೆ. ಸರ್ಕಾರಿ ಆಡಳಿತ ವ್ಯವಸ್ಥೆ ಭ್ರಷ್ಟಾಚಾರಕ್ಕೆ ಬಡಜನರನ್ನು ಬಲಿಕೊಡುವುದು ಸರಿಯಲ್ಲ. ಆದಾಯ ಪ್ರಮಾಣ ಪತ್ರ ನೀಡಬೇಕಾದ ಕಂದಾಯ ಇಲಾಖೆ, ಚುನಾವಣೆ ಆಯೋಗದ ಎಸ್‌ಐಆರ್ ಪ್ರಕ್ರಿಯೆಯಲ್ಲಿ ಅರ್ಹರನ್ನು ಕೈಬಿಟ್ಟಿದೆ ಎಂದು ಆರೋಪಿಸಿದರು.
ಕೂಡಲೇ ಪಿಂಚಣಿ ಮರುಪರಿಶೀಲನಾ ಕಾರ್ಯಕ್ಕೆ ಗ್ರಾಪಂನಲ್ಲಿ ಪ್ರತ್ಯೇಕ ಸಿಬ್ಬಂದಿ ನೇಮಿಸಿ ಪ್ರಕ್ರಿಯೆಯನ್ನು ತ್ವರಿತಗೊಳಿಸಬೇಕು. ಮರು ಪರಿಶೀಲನೆ ಪ್ರಕ್ರಿಯೆ ಬಗ್ಗೆ ಜಾಗೃತಿ ಮೂಡಿಸಬೇಕು. ಪೋರ್ಟಲ್ ಓಪನ್ ಸಮಸ್ಯೆ ಪರಿಹರಿಸಬೇಕು. ತಕ್ಷಣವೇ ನಿಂತಿರುವ ಪಿಂಚಣಿ ಬಿಡುಗಡೆಮಾಡಬೇಕು. ಅರ್ಹರಿಗೆ ಪ್ರತಿತಿಂಗಳು ಪಿಂಚಣಿ ನೀಡಬೇಕು ಎಂದು ಒತ್ತಾಯಿಸಿದರು.