_1771003916407.webp?w=480&auto=format%2Ccompress&fit=max)
_1771003916407.webp?w=480&auto=format%2Ccompress&fit=max)
ರಾಯಚೂರು
ರಾಜ್ಯ ಸರ್ಕಾರ ಬಜೆಟ್ ಮಂಡಿಸಲು ಸಿದ್ದತೆ ನಡೆಸಿದ್ದು ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಹೊಸ ಬೃಹತ್ ಕೈಗಾರಿಕೆಗಳು ಸ್ಥಾಪನೆ ಸೇರಿ ವಿಶೇಷ ಅನುದಾನ ನೀಡಬೇಕೆಂದು ರಾಯಚೂರು ಕಾಟನ್ ಮಿಲ್ಲರ್ಸ್ ಅಸೋಸಿಯೇಷನ್ ಅಧ್ಯಕ್ಷ ವಿ.ಲಕ್ಷ್ಮೀರೆಡ್ಡಿ ಒತ್ತಾಯಿಸಿದರು.
ನಗರದ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೈಗಾರಿಕೆಗಳ ಉತ್ತೇಜನವಿಲ್ಲದೇ ಉದ್ಯೋಗ ಸೃಷ್ಟಿಸಲು ಸಾಧ್ಯವಿಲ್ಲ. ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಗೆ 25 ಸಾವಿರ ಕೋಟಿ ರೂ ಅನುದಾನ ಕಾಯ್ದಿರಿಸಿ ಶೇ.25 ರಷ್ಟು ಅನುದಾನವನ್ನು ಕೈಗಾರಿಕೆಗಳ ಅಭಿವೃದ್ಧಿಗೆ ಮೀಸಲಿಡಬೇಕು.
ಮಹತ್ವಾಂಕ್ಷೆ ಜಿಲ್ಲೆಗಳಿಂದ ಗುರುತಿಸಿಕೊಂಡಿರುವ ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಹತ್ತಿ ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದನೆಯಾಗುತ್ತಿದ್ದು ಮೇಗಟೆಕ್ಸ್ ಟೈಲ್ ಪಾರ್ಕ್ ಸ್ಥಾಪನೆಗೆ ಕೇಂದ್ರದ ಮೇಲೆ ಒತ್ತಡ ತರಬೇಕಿದೆ. ಕಲ್ಯಾಣ ಕರ್ನಾಟಕದ 42 ಜನ ಶಾಸಕರು ಮುಖ್ಯಮಂತ್ರಿಗಳ ಮೇಲೆ ಒತ್ತಡ ಹಾಕಿ ನಿರುದ್ಯೋಗ ಸಮಸ್ಯೆ ನೀಗಿಸಲು ತರಬೇತಿ, ಉದ್ಯೋಗ ಒದಗಿಸುವ ಕೈಗಾರಿಕೆಗಳ ಸ್ಥಾಪನೆಗೆ ಒತ್ತು ನೀಡಬೇಕು. ಕೃಷಿ ಆಧಾರಿತ ಕೈಗಾರಿಕೆಗಳು ಸಾಕಷ್ಟು ಕಾರ್ಯನಿರ್ವಹಿಸುತ್ತಿದ್ದು ಕಡಿಮೆ ದರದಲ್ಲಿ ಕೈಗಾರಿಕೆ ಸಾಲ ಯೋಜನೆ ರೂಪಿಸಬೇಕು. 2013-2019 ಜಾರಿಗೊಳಿಸಲಾಗಿದ್ದ ಮಹಿಳಾ ಉದ್ದಿಮೆದಾರರಿಗೆ ಶೇ.4 ಬಡ್ಡಿ ದರದಲ್ಲಿ ಎರಡು ಕೋಟಿ ಸಾಲ ಯೋಜನೆ ಸ್ಥಗಿತಗೊಳಿಸಲಾಗಿದೆ. ಮಹಿಳಾ ಉದ್ದಿಮೆಗಳು ಹೆಚ್ಚಿಸಲು ಶೇ.4 ಬಡ್ಡಿದರದಲ್ಲಿ 10 ಕೋಟಿ ರೂ ಸಾಲ ನೀಡುವ ಯೋಜನೆ ರೂಪಿಸಬೇಕೆಂದರು.
ಈ ಸಂದರ್ಭದಲ್ಲಿ ವಾಣಿಜ್ಯೋಧ್ಯಮ ಸಂಘದ ಮಾಜಿ ಅಧ್ಯಕ್ಷ ನಾಗನಗೌಡ ಹರವಿ,ರಮೇಶ, ನಾರಾಯಣ ಸೇಠ ಇದ್ದರು.