ಲಿಂಗಸುಗೂರು ಪ್ರಥಮ ದರ್ಜೆ ಕಾಲೇಜಿನಲ್ಲಿ ಮಹಿಳೆಯರ ಆರೋಗ್ಯ ಮತ್ತು ಲೈಂಗಿಕ ಕಿರುಕುಳ ಕುರಿತ ಉಪನ್ಯಾಸ ಕಾರ್ಯಕ್ರಮವನ್ನು ಡಾ.ಸೌಮ್ಯಶ್ರೀ ಉದ್ಘಾಟಿಸಿದರು. ಪ್ರಾಚಾರ್ಯ ಡಾ.ವೆಂಕಟರಮಣ ಆಂತರಿಕ ದೂರು ಸಮಿತಿ ಸಂಯೋಜಕಿ ಜ್ಯೋತಿ ಲಕ್ಷ್ಮೀ ಪಾಟೀಲ, ಸಹಾಯಕ ಪ್ರಾದ್ಯಾಪಕ ಗಣೇಶ ದರ್ಬಿ, ಸರಿತಾ ಇಂಚೂರು, ನಜ್ಮಾಬೇಗಂ, ಅನುಪಮಾ ಪಾಟೀಲ್ ಇದ್ದರು.
ಲಿಂಗಸುಗೂರು: ಮಹಿಳೆ ಆರೋಗ್ಯವಾಗಿದ್ದರೆ ಇಡೀ ಕುಟುಂಬವೇ ಆರೋಗ್ಯವಾಗಿರುತ್ತದೆ. ಮಹಿಳೆಯರ ಮೇಲಾಗುತ್ತಿರುವ ದೌರ್ಜನ್ಯ ತಡೆಯಲು ಮಹಿಳೆಯರೇ ಧ್ವನಿ ಎತ್ತಿ ಪ್ರತಿಭಟಿಸಬೇಕು ಎಂದು ಡಾ.ಸೌಮ್ಯಶ್ರೀ ಕಂಬಾರ ಹೇಳಿದರು.
ಪಟ್ಟಣದ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ಆಂತರಿಕ ದೂರು ಸಮಿತಿ ಕೋಶದ ಸಹಯೋಗದಲ್ಲಿ ನಡೆದ ಮಹಿಳೆಯರ ಆರೋಗ್ಯ ಮತ್ತು ಲೈಂಗಿಕ ಕಿರುಕುಳ ಕುರಿತು ಉಪನ್ಯಾಸದಲ್ಲಿ ಮಾತನಾಡಿ, ಅಮಾನವೀಯ ಪೈಶಾಚಿಕ ಕೃತ್ಯಗಳು ಎಗ್ಗಿಲ್ಲದೇ ನಡೆಯುತ್ತಿವೆ.
ಮಹಿಳೆಯರ ಮೇಲಿನ ದೌರ್ಜನ್ಯವು ಮಾನವ ಹಕ್ಕುಗಳ ಉಲ್ಲಂಘನೆಯಲ್ಲಿ ಒಂದಾಗಿದೆ. ವಿದ್ಯಾರ್ಥಿನಿಯರು ತಮಗೆ ಒದಗುವ ತೊಂದರೆಗಳಿಗೆ ಆಂತರಿಕ ದೂರು ಸಮಿತಿಗೆ ದೂರು ಸಲ್ಲಿಸಿ ನ್ಯಾಯ ಪಡೆಯಬೇಕು ಮಹಿಳೆಯರ ಮೇಲಿನ ದೌರ್ಜನ್ಯವು ಇಡೀ ಸಮಾಜದ ಮೇಲೆ ಪರಿಣಾಮ ಬೀರುತ್ತದೆ ಎಂದರು.
ಹಿಂಸಾಚಾರ
ಪ್ರಾಚಾರ್ಯ ಡಾ.ವೆಂಕಟರಮಣ ಮಾತನಾಡಿ, ತೊಟ್ಟಿಲು ತೂಗುವ ಕೈ ಜಗತ್ತನೇ ಆಳಬಲ್ಲದು. ಮಹಿಳೆಯರ ಮೇಲಾಗುವ ಹಿಂಸಾಚಾರದಿಂದ ಮಹಿಳೆಯರ ಆರೋಗ್ಯ ಮತ್ತು ಸುರಕ್ಷತೆಗೆ ತೊಂದರೆಯಾಗುತ್ತದೆ ಎಂದರು.