ಈ ಹಿಂದಿನ ಕೆಲ ವರ್ಷಗಳಲ್ಲಿ ಹಮಾಲರಿಗೆ ಗುರುತಿನ ಚೀಟಿ ಮತ್ತು ಇನ್ನಿತರ ಸೌಲಭ್ಯಗಳು ದೊರೆಯುತ್ತಿದ್ದವು. ಕಳೆದ ವರ್ಷದಿಂದ ಕುಂಟು ನೆಪವೊಡ್ಡಿ ಹಮಾಲರ ಗುರುತಿನ ಚೀಟಿ ನವೀಕರಣ ಮಾಡುವುದಾಗಲಿ, ಹೊಸದಾಗಿ ಗುರುತಿನ ಚೀಟಿ ಕೊಟ್ಟಿಲ್ಲ. ಕೂಡಲೇ ಸರ್ಕಾರಿ ಹಾಗೂ ಖಾಸಗಿ ಮಿಲ್ ಗೋದಾಮು, ವೇರ್‌ಹೌಸ್, ಲಾರಿ ಮೂಲಕ ಕೆಲಸ ನಿರ್ವಹಿಸುವ ಹಮಾಲಿ ಕಾರ್ಮಿಕರಿಗೆ ಗುರುತಿನ ಚೀಟಿಯನ್ನು ಕಡ್ಡಾಯವಾಗಿ ನೀಡಬೇಕು. ಗ್ರಾಮೀಣ, ನಗರ, ಬಜಾರ ಹಮಾಲಿ ಕಾರ್ಮಿಕರಿಗೆ ಉದ್ಯೋಗ ಭದ್ರತೆ ಒದಗಿಸಬೇಕು. ವಸತಿ ಇಲ್ಲದವರಿಗೆ ವಸತಿ ಮತ್ತು ವಸತಿ ಇದ್ದವರಿಗೆ ಮನೆ ಮಂಜೂರು ಮಾಡಬೇಕೆಂದು ಮನವಿ ಸಲ್ಲಿಸಲಾಯಿತು.