ಕೊಲೆ ಆರೋಗಳಿಗೆ ಮರಣದಂಡೆ ವಿಧಿಸಲಿ

ಕೃಷ್ಣಮೂರ್ತಿ
ಕೃಷ್ಣಮೂರ್ತಿ
Published on

ರಾಯಚೂರು

ಹದ್ದಿನಾಳ ಗ್ರಾಮದಲ್ಲಿ ನಡೆದ ಬಿಎಸ್‌ಪಿ ಉಸ್ತುವಾರಿ ಭೂಮಾನಂದ ಕೊಲೆ ಪ್ರಕರಣದ ಆರೋಪಿಗಳಿಗೆ ಮರಣದಂಡೆ ವಿಧಿಸುವಂತೆ ಪೊಲೀಸರು ಚಾರ್ಜಶೀಟ್ ಸಲ್ಲಿಸಬೇಕೆಂದು ಬಹುಜನ ಸಮಾಜ ಪಕ್ಷದ ರಾಜ್ಯಾಧ್ಯಕ್ಷ ಎಂ.ಕೃಷ್ಣಮೂರ್ತಿ ಒತ್ತಾಯಿಸಿದರು.

ನಗರದ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಭೂಮಾನಂದ ಕೊಲೆ ಪ್ರಕರಣದ ಹಿಂದೆ ಎಸ್‌ಟಿ ಸಮುದಾಯವರ ನಡೆಸಿರುವ ದೌರ್ಜನ್ಯ ಕಾರಣವಾಗಿದೆ. ಎಸ್ಸಿಎಸ್ಟಿ ಸಮೂದಾಯಗಳ ಮಧ್ಯೆ ಸಂಘರ್ಷ ಹೆಚ್ಚಳವಾಗುತ್ತಿರುವದನ್ನು ತಡೆಯಲು ಸಾಮರಸ್ಯದ ಅವಶ್ಯಕತೆಯಿದೆ. ಎರಡು ಸಮೂದಾಯಗಳ ಮಧ್ಯೆ ಸೌರ್ಹಾದಯುತ ಸಂಬಂಧ ಬೆಳೆಸಲು ಸರ್ಕಾರ, ವಿಶೇಷವಾಗಿ ಸಂಸದ ಜಿ.ಕುಮಾರನಾಯಕ ಪ್ರಯತ್ನಿಸಬೇಕಿದೆ.

ಈ ಹಿಂದೆ ಮಾನ್ವಿ ತಾಲೂಕಿನ ಮದಲಾಪುರುನಲ್ಲಿ ಪ್ರಸಾದ ಎಂಬ ಯುವಕ ಕೊಲೆ ಘಟನೆ ಜರುಗಿತ್ತು. ಎರಡನೇ ಪ್ರಕರಣ ಹದ್ದಿನಾಳದಲ್ಲಿ ನಡೆದಿದೆ. ಭೂಮಾನಂದ ಈ ಹಿಂದೆಯೇ ಗಬ್ಬೂರು ಪೊಲೀಸರಿಗೆ ಮಾಹಿತಿ ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. 12 ವರ್ಷಗಳಿಂದ ಒಂದೇ ಠಾಣೆಯಲ್ಲಿ ಕೆಲ ಸಿಬ್ಬಂದಿಗಳಿದ್ದು ಕೂಡಲೇ ವರ್ಗಾವಣೆ ಮಾಡಬೇಕು. ಲೋಪ ಎಸಗಿದ ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಎಸ್‌ಟಿ ಸಮುದಾಯವರು ಅಸ್ಪಶ್ಯ ಜಾತಿಗಳ ಮೇಲೆ ನಡೆಸುವ ಹಲ್ಲೆ ಪ್ರಕರಣಗಳಲ್ಲಿ ಅವರ ಜಾತಿ ಪ್ರಮಾಣ ಪತ್ರವನ್ನೇ ರದ್ದುಪಡಿಸುವ ಕಾಯ್ದೆ ತಿದ್ದುಪಡಿ ತಂದು ಜಾರಿಗೊಳಿಸಬೇಕು. ಮೃತ ಭೂಮಾನಂದ ಕುಟುಂಬಕ್ಕೆ ಪರಿಹಾರ, ಭೂಮಿ, ಪತ್ನಿಗೆ ಸರ್ಕಾರ ಉದ್ಯೋಗ ಒದಗಿಸಬೇಕೆಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಪ್ರಮುಖರಾದ ಬಸವರಾಜ ಭಂಡಾರಿ, ಹನುಮಂತಪ್ಪ ವಕೀಲ್, ಜೈಭೀಮ್, ಬುಡ್ಡಪ್ಪ, ವೈ.ನರಸಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net