ಸುಂಕೇಶ್ವರಹಾಳದಲ್ಲಿ ನಡೆದ ಯುವಕನ ಕೊಲೆ ಪ್ರಕರಣದಲ್ಲಿ ಪತ್ರಕರ್ತ ಭೀಮರಾಯ ಹದ್ದಿನಾಳ ಹೆಸರು ಕೈಬಿಡುವಂತೆ ಆಗ್ರಹಿಸಿ ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾದಿಂದ ತಹಸೀಲ್ದಾರ್ ಅಶೋಕ ಪವಾರ್ ಅವರಿಗೆ ಗುರುವಾರ ಮನವಿ ಸಲ್ಲಿಸಲಾಯಿತು.
ಪೊಲೀಸ್ ತನಿಖೆಯಲ್ಲಿ ಪ್ರಮುಖ ಆರೋಪಿಗಳ ಮಾಹಿತಿ ಲಭ್ಯವಾಗಿದ್ದು, ಅವರನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು. ಆದರೆ ಪ್ರಕರಣಕ್ಕೆ ಸಂಬಂಧವಿಲ್ಲದವರನ್ನು ಆರೋಪಿಗಳ ಪಟ್ಟಿಗೆ ಸೇರಿಸಿರುವುದು ಖಂಡನೀಯ.
ಭೀಮರಾಯ ಹದ್ದಿನಾಳ ಹೆಸರಿಗೆ ಕಪ್ಪು ಚುಕ್ಕೆ ತರಲು ಹಾಗೂ ಮಾನಸಿಕ ಹಿಂಸೆ ನೀಡುವ ಉದ್ದೇಶದಿಂದ ಪ್ರಕರಣದಲ್ಲಿ ಅವರ ಹೆಸರು ಸೇರಿಸಲಾಗಿದೆ ಎಂಬ ಅನುಮಾನವಿದೆ. ಈ ಪ್ರಕರಣದಲ್ಲಿ ಇನ್ನೂ ಹಲವು ಅಮಾಯಕರ ಹೆಸರು ಸೇರ್ಪಡೆಯಾಗಿದ್ದು, ಯಾರೋ ಮಾಡಿದ ತಪ್ಪಿಗೆ ಮತ್ಯಾರೋ ತೊಂದರೆ ಅನುಭವಿಸಬಾರದು ಎಂದು ತಿಳಿಸಲಾಯಿತು.
ಪ್ರಮುಖರಾದ ಗುಜ್ಜಲ್ ಬಸವರಾಜ ನಾಯಕ, ನಾಗರಾಜ, ಬಸವರಾಜ ನಾಯಕ, ಅಪ್ಪಾಜಿ ನಾಯಕ, ನವಲಕಲ್ ನಾಗೇಶ, ವೆಂಕಟೇಶ ಮುರ್ಕಿಗುಡ್ಡ, ಸಾಬಣ್ಣ ನಾಯಕ ಹುಣಚೇಡಿ, ರವಿ ನಾಯಕ, ವೆಂಕಟೇಶ ನಾಯಕ ಇತರರಿದ್ದರು.