ಮಸ್ಕಿ ಉಪ ತಹಸೀಲ್ದಾರ್ ಪ್ರಕಾಶ ಬುಳ್ಳಾ ಅವರಿಗೆ ಗುಡಿಹಾಳ ಹಾಗೂ ಮಿಟ್ಟಿಕೆಲ್ಲೂರು ಗ್ರಾಮಸ್ಥರು ಮನವಿ ಸಲ್ಲಿಸಿದರು. ನಾಗರಾಜ ಗುಡಿಹಾಳ, ಗದ್ದೆಪ್ಪ ಮಿಟ್ಟಿಕೆಲ್ಲೂರು, ರಣಜಾನ್ ಬಿ, ನೂರ್‌ಜಾನ್ ಬಿ. ರೇಣುಕಮ್ಮ, ಜೈನಾಬಿ, ಹನುಮಮ್ಮ, ಗಂಗಮ್ಮ ಸೇರಿದಂತೆ ಅನೀಕ ವಸತಿ ಫಲಾನುಭವಿಗಳು ಇದ್ದರು.
ಮಸ್ಕಿ: ತಾಲೂಕಿನ ಮಟ್ಟೂರು ಗ್ರಾಮಪಂಚಾಯಿತಿ ವ್ಯಾಪ್ತಿಯ ಗುಡಿಹಾಳ ಹಾಗೂ ಮಿಟ್ಟಿಕೆಲ್ಲೂರು ಗ್ರಾಮಗಳಲ್ಲಿ ಅತಿವೃಷ್ಟಿಯಿಂದ ಹಾನಿಯಾದ ಮನೆಗಳಿಗೆ ಪರಿಹಾರ ನೀಡುವಂತೆ ಗ್ರಾಮಸ್ಥರು ಒತ್ತಾಯಿಸಿ ಉಪ ತಹಸೀಲ್ದಾರ್ ಪ್ರಕಾಶ ಬುಳ್ಳಾ ಅವರಿಗೆ ಬುಧವಾರ ಮನವಿ ಸಲ್ಲಿಸಿದರು.
ಗುಡಿಹಾಳ ಗ್ರಾಮದ ಗ್ರಾಮಸ್ಥ ಈರಣ್ಣ ಗುಡಿಹಾಳ ಮಾತನಾಡಿ, ಅತಿವೃಷ್ಟಿಗೆ ಹಾನಿಯಾದ ಮನೆಗಳಿಗೆ ಪರಿಹಾರ ಕೊಡಬೇಕು ಮತ್ತು ಬಸವ ವಸತಿ ಯೋಜನೆ ಹಾಗೂ ಪ್ರಧಾನಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ಆಯ್ಕೆಯಾದ ಫಲಾನುಭವಿಗಳಿಗೆ ಉಳಿದ ಕಂತಿನ ಹಣ ಬಿಡುಗಡೆ ಮಾಡಬೇಕು ಒತ್ತಾಯಿಸಿದರು.
ವಸತಿ ರಹಿತ ಫಲಾನುಭವಿಗಳಿಗೆ ಮನೆಗಳು ಮಂಜೂರಾಗಿದ್ದು ಪೂರ್ಣ ಪ್ರಮಾಣದ ಮನೆಗಳು ಮುಗಿದಿಲ್ಲ. ಹಣ ಬಿಡುಗಡೆ ಆಗದೆ ಅರೆ-ಬರೆ ಕೆಲಸವಾಗಿದ್ದು ಫಲಾನುಭವಿಗಳು ಕಂಗಾಲಾಗಿದ್ದಾರೆ. ಕೂಡಲೇ ಹಣ ಬಿಡುಗಡೆ ಮಾಡಿದರೆ ಮಳೆಗಾಲ ಆರಂಭವಾಗುವುದರೊಳಗೆ ಮನೆ ಕಟ್ಟಿಕೊಳ್ಳಲು ಅನುಕೂಲವಾಗುತ್ತದೆ ಎಂದರು. ಅಧಿಕಾರಿಗಳ ನಿರ್ಲಕ್ಷ ಮುಂದುವರಿದರೆ ಹೋರಾಟ ತೀವ್ರಗೊಳಿಸಲಾಗುವುದು ಎಂದರು.
ಗ್ರಾಪಂ ಮಾಜಿ ಸದಸ್ಯ ನಾಗರಾಜ ಗುಡಿಹಾಳ, ಗದ್ದೆಪ್ಪ ಮಿಟ್ಟಿಕೆಲ್ಲೂರು, ರಣಜಾನ್ ಬಿ, ನೂರ್‌ಜಾನ್ ಬಿ.ರೇಣುಕಮ್ಮ, ಜೈನಾಬಿ, ಹನುಮಮ್ಮ, ಗಂಗಮ್ಮ ಇತರರಿದ್ದರು.