ಕಾಲುವೆ ದುರಸ್ತಿಗೆ ಸರ್ಕಾರ ಮುಂದಾಗಲಿ

ಕರ್ನಾಟಕ ರಾಜ್ಯ ರೈತ ಸಂಘದ ಗೌರವಾಧ್ಯಕ್ಷ ಚಾಮರಸ ಮಾಲಿ ಪಾಟೀಲ್
ಕರ್ನಾಟಕ ರಾಜ್ಯ ರೈತ ಸಂಘದ ಗೌರವಾಧ್ಯಕ್ಷ ಚಾಮರಸ ಮಾಲಿ ಪಾಟೀಲ್
Published on
ರಾಯಚೂರು ಕೊಪ್ಪಳದಲ್ಲಿ ಹೊಡೆದುಹೋದ ಮೈಲ್‌ನಂಬರ್ 13 ರ ಕಾಲುವೆ ದುರಸ್ತಿಗೆ ಸರ್ಕಾರ ಮುಂದಾಗಬೇಕೇಂದು ಕರ್ನಾಟಕ ರಾಜ್ಯ ರೈತ ಸಂಘದ ಗೌರವಾಧ್ಯಕ್ಷ ಚಾಮರಸ ಮಾಲಿ ಪಾಟೀಲ್ ಒತ್ತಾಯಿಸಿದರು.
ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 2010 ರಲ್ಲಿ ತುಂಗಭದ್ರಾ ಎಡದಂಡೆ ಕಾಲುವೆ ಆಧುನೀಕರಣ ಕಾಮಗಾರಿ ಕೈಗೊಂಡಿರುವ ಕಾಲುವೆ ಸ್ಥಳದಲ್ಲಿಯೇ ಒಡೆದು ಹೋಗಿದೆ. ಇನ್ನೂ 18ಕ್ಕೂ ಹೆಚ್ಚು ಸ್ಥಳಗಳ ಕಾಲುವೆಗಳು ಶಿಥಿಲಗೊಂಡಿದ್ದು ಹೊಡೆದು ಹೋಗಲು ಸಿದ್ದವಾಗಿವೆ. ಕಾಲುವೆ ಲೈನಿಂಗ್ 4ಇಂಚು ನಿರ್ಮಿಸುವ ಬದಲು 2 ಇಂಚು ನಿರ್ಮಿಸಿರುವದೇ ಕಾಲುವೆ ಒಡೆಯಲು ಕಾರಣವಾಗಿದೆ.
ಜು.15 ವರೆಗೆ ಸಮಯಾವಕಾಶವಿದ್ದು ಶಿಥಿಲವಾಗಿರುವ ಕಾಲುವೆ ದುರಸ್ತಿಗೆ ಸರ್ಕಾರ ಮುಂದಾಗಬೇಕೆಂದರು. ಜೋಳ ಖರೀದಿಯಲ್ಲಿ ನಕಲಿ ಜಿಪಿಎಸ್ ಮಾಡಿರುವದನ್ನು ಪತ್ತೆ ಮಾಡಲು ಜಿಲ್ಲಾಧಿಕಾರಿಗಳು ಆದೇಶ ನೀಡಿರುವದು ಸ್ವಾಗತಾರ್ಹ. ಆದರೆ ಅಧಿಕಾರಿಗಳು ಫೇಕ್ ಜಿಪಿಎಸ್‌ನೊಂದಿಗೆ ಅರ್ಹ ರೈತರ ಮಾಹಿತಿಯನ್ನು ರದ್ದುಗೊಳಿಸುತ್ತಿರುವದು ಪ್ರಾರಂಭವಾಗಿದೆ.
ಸೇರ್ಪಡೆಗೂ ಹಣ ವಸೂಲಿ ಮಾಡಲಾಗುತ್ತಿದೆ. ಮಾನ್ವಿ ತಾಲೂಕಿನ ಜಾನೇಕಲ್, ಬ್ಯಾಗವಾಟ, ಸಿರವಾರ ಸೇರಿದಂತೆ ಸರಿ ಸುಮಾರು 6 ಸಾವಿರ ಎಕರೆ ಪ್ರದೇಶದಲ್ಲಿ ನಕಲಿ ಜಿಪಿಎಸ್ ಮಾಡಲಾಗಿದೆ. ಕೂಡಲೇ ಜಿಲ್ಲಾಧಿಕಾರಿಗಳು ಸೂಕ್ತ ಪರಿಶೀಲನೆ ನಡೆಸಿ ಅರ್ಹರೈತರಿಗೆ ವಂಚನೆಯಾಗದಂತೆ ಎಚ್ಚವರಹಿಸಬೇಕೆಂದರು.
ಈ ಸಂದರ್ಭದಲ್ಲಿ ಪ್ರಮುಖರಾದ ಬೂದಯ್ಯ ಸ್ವಾಮಿ, ಮಲ್ಲಣ್ಣ ದಿನ್ನಿ, ದೇವರಾಜ ನಾಯಕ, ಸಿದ್ದಯ್ಯಸ್ವಾಮಿ, ಬಸವರಾಜ ಮಾಲಿಪಾಟೀಲ್, ಲಕ್ಷ್ಮಣ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net