ಮುದಗಲ್‌ನಲ್ಲಿ ಎಸ್ಸೆಸ್ಸೆಲ್ಸಿ-ಪಿಯುಸಿಯಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ತಿಮ್ಮಾಪುರ ಕಲ್ಯಾಣಾಶ್ರಮದ ಮಹಾಂತ ಸ್ವಾಮೀಜಿ ಸಾಲಿಮಠ ಮಾತನಾಡಿದರು. ಪತ್ರಕರ್ತ ಆರ್.ವಿ.ಗುಮಾಸ್ತೆ, ಕರವೇ ಸ್ಥಳೀಯ ಘಟಕದ ಅಧ್ಯಕ್ಷ ಎಸ್.ಎ.ನಯೀಮ್, ಮೌಲಾನಾ ಜಮೀರ ಅಹ್ಮದ ಖಾಜಿ, ಶಫೀ ಅಹ್ಮದ್ ಇತರರಿದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ತಿಮ್ಮಾಪುರದ ಮಹಾಂತ ಸ್ವಾಮೀಜಿ ಸಾಲಿಮಠ ಆಶೀರ್ವಚನ
ಮುದಗಲ್ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ
ಮುದಗಲ್: ಮಕ್ಕಳು ಅಂಕಗಳ ಜತೆಗೆ ಪ್ರತಿಭೆ, ಸಂಸ್ಕಾರ, ಸಂಸ್ಕೃತಿ ಹೊಂದಿರಬೇಕು. ಉತ್ತಮ ಫಲಿತಾಂಶ ಪಡೆದಾಗ ಗೌರವಿಸುವ ಮೂಲಕ ಪ್ರೋತ್ಸಾಹಿಸಬೇಕು ಎಂದು ತಿಮ್ಮಾಪುರ ಕಲ್ಯಾಣಾಶ್ರಮದ ಮಹಾಂತ ಸ್ವಾಮೀಜಿ ಸಾಲಿಮಠ ಹೇಳಿದರು.
ಪಟ್ಟಣದ ಪುರಸಭೆ ರಂಗಮಂದಿರದಲ್ಲಿ ಅಂಜುಮನ್ ಏ ಮುಸ್ಲಿಮೀನ್ ತಾಲೂಕು ಸಮಿತಿ ಹಾಗೂ ಮುದಗಲ್ ಘಟಕದ ಸಹಯೋಗದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಜನ್ಮದಿನ ನಿಮಿತ್ತ ಆಯೋಜಿಸಿದ್ದ ಎಸ್ಸೆಸ್ಸೆಲ್ಸಿ, ಪಿಯುಸಿ ಪರೀಕ್ಷೆಯಲ್ಲಿ ಶೇ. 85ಕ್ಕಿಂತ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದರು. ಇಸ್ಲಾಮಿನ್ ಕಮೀಟಿಯವರು ಮುದಗಲ್ ಪಟ್ಟಣದ ವಿವಿಧ ಶಾಲಾ-ಕಾಲೇಜುಗಳ ಸುಮಾರು 150 ವಿದ್ಯಾರ್ಥಿನಿಯರಿಗೆ ಗೌರವಿಸುವ ಮೂಲಕ ಅವರಿಗೆ ಪ್ರೋತ್ಸಾಹಿಸಿದ್ದು, ಆ ಮಕ್ಕಳು ಶೈಕ್ಷಣಿಕವಾಗಿ ಯಶಸ್ಸು ಕಂಡು ಉನ್ನತ ಮಟ್ಟಕ್ಕೇರಲಿ ಎಂದು ಆಶಿಸಿದರು.