ಸ್ವಾಧೀನ ಪಡಿಸಿಕೊಂಡ ಜಮೀನು ಹಸ್ತಾಂತರಿಸಲಿ

ಹಟ್ಟಿಚಿನ್ನದಗಣಿ ಕಂಪನಿ ಅಧಿಕಾರಿ ಜಗನಮೋಹನ್‌ಗೆ ಭೂ ಹಕ್ಕು ವಂಚಿತ ರೈತ ಹೋರಾಟ ಸಮಿತಿ ಸದಸ್ಯರು ಮನವಿ ಸಲ್ಲಿಸಿದರು. ರೈತರಾದ ಚಂದ್ರಶೇಖರ ಬಡಿಗೇರ, ಸುರೇಶಗೌಡ ಗುರಿಕಾರ, ಅಮರಪ್ಪ ಅಳ್ಳೋಳಿ, ಶಂಕರಗೌಡ ಬಳಾಗನೂರು, ಸಣ್ಣಯಂಕೋಬ ತಾಳಿಕೊಟಿ ಇತರರಿದ್ದರು.
ಹಟ್ಟಿಚಿನ್ನದಗಣಿ ಕಂಪನಿ ಅಧಿಕಾರಿ ಜಗನಮೋಹನ್‌ಗೆ ಭೂ ಹಕ್ಕು ವಂಚಿತ ರೈತ ಹೋರಾಟ ಸಮಿತಿ ಸದಸ್ಯರು ಮನವಿ ಸಲ್ಲಿಸಿದರು. ರೈತರಾದ ಚಂದ್ರಶೇಖರ ಬಡಿಗೇರ, ಸುರೇಶಗೌಡ ಗುರಿಕಾರ, ಅಮರಪ್ಪ ಅಳ್ಳೋಳಿ, ಶಂಕರಗೌಡ ಬಳಾಗನೂರು, ಸಣ್ಣಯಂಕೋಬ ತಾಳಿಕೊಟಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಭೂ ಹಕ್ಕು
  • ವಂಚಿತ
  • ರೈತ ಹೋರಾಟ
ಹಟ್ಟಿ ಚಿನ್ನದ ಗಣಿ: ಗಣಿ ಕಂಪನಿಯು ಯಾವುದೇ ಭೂಸ್ವಾಧೀನ ಪ್ರಕ್ರಿಯೆ ಕೈಗೊಳ್ಳದೆ ರೈತರಿಂದ ಅನುಮತಿ ಪಡೆಯದೆ ಸುಮಾರು 475 ಎಕರೆ ಕೃಷಿ ಭೂಮಿಯನ್ನು ಅಕ್ರಮವಾಗಿ ಸ್ವಾಧೀನದಲ್ಲಿಟ್ಟುಕೊಂಡಿದ್ದು ರೈತರಿಗೆ ಮರಳಿ ಹಸ್ತಾಂತರಿಸಬೇಕು ಎಂದು ಆಗ್ರಹಿಸಿ ಹಟ್ಟಿ ಭೂ ಹಕ್ಕು ವಂಚಿತ ರೈತ ಹೋರಾಟ ಸಮಿತಿ ಕಂಪನಿ ಅಧಿಕಾರಿಗೆ ಸೋಮವಾರ ಮನವಿ ಸಲ್ಲಿಸಿತು.
ಈ ಭೂಮಿಗಳಿಗೆ ಯಾವುದೇ ಕಾನೂನುಬದ್ಧ ಸ್ವಾಧೀನ ಪ್ರಕ್ರಿಯೆ ನಡೆದಿಲ್ಲ. ಆದರೂ, ಪಹಣಿ ದಾಖಲೆಗಳಲ್ಲಿ ಹಟ್ಟಿ ಚಿನ್ನದ ಗಣಿ ಕಂಪನಿ ಎಂಬ ಹೆಸರು ದಾಖಲಾಗಿದ್ದು, ರೈತರು ತಮ್ಮದೇ ಜಮೀನಿನ ಮೇಲೆ ಹಕ್ಕು ಕಳೆದುಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಜೀವನಾಧಾರವಾದ ಕೃಷಿಗೆ ಅಡ್ಡಿಯಾಗಿದ್ದು, ನೂರಾರು ಕುಟುಂಬಗಳು ಸಂಕಷ್ಟಕ್ಕೆ ಒಳಗಾಗಿವೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.
ರೈತ ಪ್ರಮುಖ ಶಿವಪುತ್ರಪ್ಪ ಮಾತನಾಡಿ, ಕಾನೂನಿನ ಪ್ರಕಾರ ಸ್ವಾಧೀನ ಮಾಡದೇ ಪರಿಹಾರವೂ ನೀಡದೇ ನಮ್ಮ ಜಮೀನನ್ನು 15ವರ್ಷಗಳಿಂದ ಕಂಪನಿ ಬಳಸಿಕೊಳ್ಳುತ್ತಿದೆ. ಇದು ರೈತರ ಮೇಲೆ ನಡೆದ ಅನ್ಯಾಯ. ತಕ್ಷಣವೇ ಪಹಣಿಯಲ್ಲಿ ಮೊದಲಿನಂತೆ ರೈತರ ಹೆಸರು ನೋಂದಣಿ ಮಾಡಿ ನಮ್ಮ ಭೂಮಿಯನ್ನು ಮರಳಿ ಕೊಡಬೇಕು ಎಂದು ಒತ್ತಾಯಿಸಿದರು.
ಗಣಿ ಕಂಪನಿ ಅಧಿಕಾರಿ ಜಗನಮೋಹನ್ ಮನವಿ ಸ್ವೀಕರಿಸಿ, ವಿಷಯವನ್ನು ಮೇಲಧಿಕಾರಿಗಳಿಗೆ ತಿಳಿಸಿ ಪರಿಶೀಲನೆ ನಡೆಸುವ ಭರವಸೆ ನೀಡಿದರು.
ರೈತರಾದ ದ್ರಾಕ್ಷಾಯಣಿ ಸಜ್ಜನ್, ಬಾಲದಂಡಪ್ಪ ನಾಯಕ, ಅಮರೇಶ ಕುರ್ಡಿ, ಬಾಬು ನಾಯಿಕೋಡಿ, ಹನುಮಂತ ಕಬ್ಬೇರ, ಯಂಕಣ್ಣ ಯಾದವ, ಪಾರ್ವತಿ, ಸರಸ್ವತಿ ಶಿವಾನಂದ, ನಾರಾಯಣಪ್ಪ ಕಬ್ಬೇರ ಇತರರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net