ವಿದ್ಯಾರ್ಥಿಗಳು ಎಐ ಕೌಶಲ ಅಳವಡಿಸಿಕೊಳ್ಳಲಿ

ಮಾನ್ವಿಯ ಬಾಷುಮಿಯ ಸಾಹುಕಾರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸೋಮವಾರ ಕೃತಕ ಬುದ್ಧಿಮತ್ತೆ (ಎಐ) ಶಾರ್ಟಟರ್ಮ್ ಕೋರ್ಸ್ ಕಾರ್ಯಕ್ರಮವನ್ನು ಪ್ರಾಚಾರ್ಯ ಡಾ. ಜೆ.ಎಲ್. ಈರಣ್ಣ ಉದ್ಘಾಟಿಸಿದರು. ಡಾ.ಸೈಯದ್ ಮೀನಾಜ ವುಲ್ ಹಸನ್, ಐಕ್ಯೂಎಸಿ ಸಂಚಾಲಕ ಶಶಿಧರ, ಪ್ರವೀಣ್‌ಕುಮಾರ್, ದಿವ್ಯಶ್ರೀ, ಪೂಜಾ ಇದ್ದರು.

Published on
ಮಾನ್ವಿ: ಪ್ರಸ್ತುತ ದಿನಗಳಲ್ಲಿ ಕಂಪ್ಯೂಟರ್ ಹಾಗೂ ಎಐ ಕೋರ್ಸ್ ಜ್ಞಾನ ಅಗತ್ಯವಾಗಿದ್ದು, ಪ್ರತಿಯೊಬ್ಬರೂ ಆಸಕ್ತಿಯಿಂದ ಕಲಿಯಬೇಕಿದೆ ಎಂದು ಬಾಷುಮಿಯ ಸಾಹುಕಾರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಡಾ.ಜೆ.ಎಲ್. ಈರಣ್ಣ ಹೇಳಿದರು. 
ಪಟ್ಟಣದ ಬಾಷುಮಿಯ ಸಾಹುಕಾರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸೋಮವಾರ ಮಾನ್ವಿ ಉದ್ಯೋಗ ಭರವಸೆ ಕೋಶ ಹಾಗೂ ಸಂಭವ ಫೌಂಡೇಷನ್ ಬೆಂಗಳೂರು ಇವರ ಸಹಯೋಗದಲ್ಲಿ ವಿದ್ಯಾರ್ಥಿಗಳಿಗೆ ಕೃತಕ ಬುದ್ಧಿಮತ್ತೆ (ಎಐ) ಶಾರ್ಟಟರ್ಮ್ ಕೋರ್ಸ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. 
ಪ್ರಸ್ತುತ ಕೌಶಲ ಭಾರತ ಎನ್ನುವ ಶೀರ್ಷಿಕೆ ಅಡಿ ದೇಶ ಕಾರ್ಯನಿರ್ವಹಿಸುತ್ತಿದೆ. ಈ ಹಿನ್ನಲೆಯಲ್ಲಿ ವಿದ್ಯಾರ್ಥಿಗಳು ಕೌಶಲಗಳನ್ನು ಅಳವಡಿಸಿಕೊಳ್ಳಬೇಕು ಎಂದರು. ಗಣಕಯಂತ್ರ ವಿಭಾಗದ ಮುಖ್ಯಸ್ಥ ಡಾ.ಸೈಯದ್ ಮೀನಾಜವುಲ್ ಹಸನ್, ಐಕ್ಯೂಎಸಿ ಸಂಚಾಲಕ ಶಶಿಧರ ಮಾತನಾಡಿದರು, ಉದ್ಯೋಗ ಭರವಸೆ ಕೋಶದ ಸಂಯೋಜಕ ಚಂದ್ರು, ಡಾ .ಚನ್ನಬಸವ, ಸಂಭವ ಫೌಂಡೇಷನ್ ಸಂಯೋಜಕ ಪ್ರವೀಣ್‌ಕುಮಾರ್, ದಿವ್ಯಶ್ರೀ, ಪೂಜಾ ಇತರರಿದ್ದರು.  
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net