ಕೊಲೆ ಪ್ರಕರಣಗಳನ್ನು ಸಿಐಡಿಗೆ ವಹಿಸಲಿ

ಕೆ.ಇ.ಕುಮಾರ
ಕೆ.ಇ.ಕುಮಾರ
Published on

ಪ್ರಮುಖ ಮುಖ್ಯಾಂಶಗಳು

  • ಕಾರ್ಯಾಧ್ಯಕ್ಷ
  • ಒತ್ತಾಯ
  • ದಲಿತ
ದೇವದುರ್ಗ:

ಜಿಲ್ಲೆಯಲ್ಲಿ ಕಟ್ಟುನಿಟ್ಟಿನ ಕಾನೂನು ಕ್ರಮಕೈಗೊಳ್ಳುವಲ್ಲಿ ವಿಫಲವಾಗಿರುವ ಡಿಸಿ ಪೂವಿತಾ ಎಸ್., ಎಸ್ಪಿ ಅರುಣಾಂಗ್ಶ ಗಿರಿ ಅವರನ್ನು ವರ್ಗಾವಣೆ ಮಾಡಬೇಕು. ಜಿಲ್ಲೆಯಲ್ಲಿ ಆದ ಕೊಲೆ ಪ್ರಕರಣಗಳನ್ನು ಸಿಒಡಿಗೆ ವಹಿಸಬೇಕು ಎಂದು ದಲಿತ ಬಲಗೈ ಜಾತಿಗಳ ಒಕ್ಕೂಟದ ಕಾರ್ಯಾಧ್ಯಕ್ಷ ಕೆ.ಇ.ಕುಮಾರ ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿ, ಮೂರು ಕೊಲೆ ಪ್ರಕರಣಗಳನ್ನು ಡಿಸಿಇಆರ್‌ಗೆ ವಹಿಸಲಾಗಿದೆ. ಆದರೆ ಅಲ್ಲಿ ಸಿಬ್ಬಂದಿಯೇ ಇಲ್ಲ. ಒಬ್ಬರು ಡಿವೈಎಸ್‌ಪಿ, ನಾಲ್ವರು ಮುಖ್ಯಪೇದೆ, ನಾಲ್ವರು ಪೇದೆಗಳಿದ್ದಾರೆ. ಜಿಲ್ಲಾದ್ಯಂತ ನಡೆಯುವ ಪ್ರಕರಣಗಳನ್ನು ಇದಕ್ಕೆ ಒಪ್ಪಿಸಲಾಗುತ್ತಿದೆ.
ಡಿಸಿಇಆರ್‌ನಲ್ಲಿ 124ಕೇಸ್‌ಗಳಲ್ಲಿ ತಪ್ಪಿತಸ್ಥರಿಗೆ ಶಿಕ್ಷೆಯಾಗಿಲ್ಲ. ಹೀಗಾಗಿ ಈ ಪ್ರಕರಣಗಳನ್ನು ಸಿಒಡಿಗೆ ಒಪ್ಪಿಸಬೇಕು. ಪ್ರಕರಣಗಳ ವಿಚಾರಣೆಗೆ ಪರಿಶಿಷ್ಟ ಆಯೋಗಕ್ಕೂ ದೂರು ನೀಡಲಾಗಿದೆ. ಜಿಲ್ಲೆಯಲ್ಲಿ ಅಕ್ರಮ ಮರಳು, ಸಿಎಚ್ ಪೌಡರ್, ಗಾಂಜಾ ಸದ್ದಿಲ್ಲದೆ ನಡೆಯುತ್ತಿದೆ.
ಪೊಲೀಸ್ ಇಲಾಖೆ ನಿಯಂತ್ರಿಸುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿದರು. ಜಿಲ್ಲಾಧ್ಯಕ್ಷ ಭೀಮಣ್ಣ ಮಂಚಾಲ, ಉಪಾಧ್ಯಕ್ಷ ಆರ್.ಬಸವರಾಜ, ಆರ್.ರಾಮಕೃಷ್ಣ, ಶಶಿಧರ, ಬಾಬು ಕೆಎಸ್, ಎಂ.ವೆಂಕಟೇಶ ಆರೋಲಿಕರ್, ಗಾರ್ಲೆ ದಿಗಂಬರ್, ಪ್ರಾಣೇಶ ಮಂಚಾಲ್, ನಾಗರಾಜ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net