ಪ್ರತಿಭೆಗಳ ಗುರುತಿಸುವ ಕೆಲಸವಾಗಲಿ

ಪಾಮನಕಲ್ಲೂರಿನಲ್ಲಿ ಏರ್ಪಡಿಸಿದ್ದ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಮಕ್ಕಳ ಛದ್ಮವೇಷ ಗಮನ ಸೆಳೆಯಿತು.
ಪಾಮನಕಲ್ಲೂರಿನಲ್ಲಿ ಏರ್ಪಡಿಸಿದ್ದ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಮಕ್ಕಳ ಛದ್ಮವೇಷ ಗಮನ ಸೆಳೆಯಿತು.
Published on
ಕವಿತಾಳ: ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಬೇಕು ಎಂದು ಸಿಆರ್‌ಪಿ ಸೌಮ್ಯಶ್ರೀ ಹೇಳಿದರು. 
ಪಾಮನಕಲ್ಲೂರಿನ ಸರ್ಕಾರಿ ಶಾಸಕರ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ  ಸೋಮವಾರ ಜಿಪಂ, ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಮಾನ್ವಿ, ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯ, ಸಮೂಹ ಸಂಪನ್ಮೂಲ ಕೇಂದ್ರದಿಂದ ಏರ್ಪಡಿಸಿದ್ದ ವಲಯಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
 ಪ್ರತಿ ಮಗುವಿನಲ್ಲಿ ಒಂದಿಲ್ಲೊಂದು ಪ್ರತಿಭೆ ಅಡಗಿರುತ್ತದೆ. ಅದನ್ನು ಗುರುತಿಸುವುದು ಪಾಲಕರು ಹಾಗೂ ಶಿಕ್ಷಕರ ಕರ್ತವ್ಯ ಎಂದರು. ಪ್ರಭಾರ ಮುಖ್ಯಶಿಕ್ಷಕಿ ಲಕ್ಷ್ಮೀ ಅಧ್ಯಕ್ಷತೆವಹಿಸಿದ್ದರು. ಮಕ್ಕಳಿಂದ ಬಯಲಾಟ, ಛದ್ಮವೇಷ, ನೃತ್ಯ, ಜಾನಪದ, ಸಂಗೀತ ಕಾರ್ಯಕ್ರಮ ನಡೆಯಿತು. 
ಗ್ರಾಪಂ ಸದಸ್ಯರಾದ ಶ್ರೀನಿವಾಸ, ಬಸವರಾಜ, ಖಾಜಮ್ಮ ಕಲ್ಯಾಣಿ, ಗ್ರಾಮದ ಪ್ರಮುಖರಾದ ಲಕ್ಷ್ಮಣ ಚೌಡ್ಲಿ, ಅಂಬಯ್ಯ ಚೌಡ್ಲಿ, ಅಮರೇಗೌಡ, ಮುಖ್ಯ ಶಿಕ್ಷಕರಾದ ಮಾಲತೇಶ, ಶರಣಪ್ಪ ರೂಡಗಿ, ಬಸವರಾಜ ಯತಗಲ್, ಬಿ.ಪುಷ್ಪಾ ವಟಗಲ್, ಅಮರೇಶ ನೆಲಕೋಳ ಇತರರಿದ್ದರು. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net