ಪ್ರತಿಯೊಬ್ಬರೂ ಸಂವಿಧಾನದ ಮಹತ್ವ ತಿಳಿಯಲಿ

ಅರಕೇರಾ ತಾಲೂಕಿನ ರಾಮದುರ್ಗ ಸರ್ಕಾರಿ ಪ್ರೌಢ ಶಾಲೆಯಲ್ಲಿ ಆಯೋಜಿಸಿದ್ದ ವಿದ್ಯಾರ್ಥಿಗಳ ನಡೆ ಸಂವಿಧಾನ ಕಡೆ ಕಾರ್ಯಕ್ರಮದಲ್ಲಿ ಸಂವಿಧಾನ ಪೀಠಿಕೆಯನ್ನು ಮುಖ್ಯ ಶಿಕ್ಷಕ ಲಕ್ಷ್ಮಣ ನಾಯಕಗೆ ಸಮತಾ ಗ್ರಾಮೀಣಾಭಿವೃದ್ಧಿ ಹಾಗೂ ಶಿಕ್ಷಣ ಸಂಸ್ಥೆ ಪ್ರಧಾನ ಕಾರ್ಯದರ್ಶಿ ಬಸವರಾಜ ಬ್ಯಾಗವಾಟ್ ನೀಡಿದರು
ಅರಕೇರಾ ತಾಲೂಕಿನ ರಾಮದುರ್ಗ ಸರ್ಕಾರಿ ಪ್ರೌಢ ಶಾಲೆಯಲ್ಲಿ ಆಯೋಜಿಸಿದ್ದ ವಿದ್ಯಾರ್ಥಿಗಳ ನಡೆ ಸಂವಿಧಾನ ಕಡೆ ಕಾರ್ಯಕ್ರಮದಲ್ಲಿ ಸಂವಿಧಾನ ಪೀಠಿಕೆಯನ್ನು ಮುಖ್ಯ ಶಿಕ್ಷಕ ಲಕ್ಷ್ಮಣ ನಾಯಕಗೆ ಸಮತಾ ಗ್ರಾಮೀಣಾಭಿವೃದ್ಧಿ ಹಾಗೂ ಶಿಕ್ಷಣ ಸಂಸ್ಥೆ ಪ್ರಧಾನ ಕಾರ್ಯದರ್ಶಿ ಬಸವರಾಜ ಬ್ಯಾಗವಾಟ್ ನೀಡಿದರು
Published on

ಪ್ರಮುಖ ಮುಖ್ಯಾಂಶಗಳು

  • ಗಿಲ್ಲೇಸುಗೂರು ಬ್ಲಾಕ್ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಶಿವಪ್ಪ ನಾಯಕ ರಾಮದುರ್ಗ ಹೇಳಿ
  • ವಿದ್ಯಾರ್ಥಿಗಳ ನಡೆ ಸಂವಿಧಾನದ ಕಡೆ ಕಾರ್ಯಕ್ರಮ
ಅರಕೇರಾ: ಜಗತ್ತಿನ ಅತಿದೊಡ್ಡ ಸಂವಿಧಾನ ಎಂಬ ಖ್ಯಾತಿ ಭಾರತದ ಸಂವಿಧಾನಕ್ಕಿದೆ ಎಂದು ಗಿಲ್ಲೇಸುಗೂರು ಬ್ಲಾಕ್ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಶಿವಪ್ಪ ನಾಯಕ ರಾಮದುರ್ಗ ಹೇಳಿದರು. 
ತಾಲೂಕಿನ ರಾಮದುರ್ಗ ಸರ್ಕಾರಿ ಪ್ರೌಢಶಾಲೆಯಲ್ಲಿ ಗಬ್ಬೂರಿನ ಸಮತಾ ಗ್ರಾಮೀಣಾಭಿವೃದ್ಧಿ ಹಾಗೂ ಶಿಕ್ಷಣ ಸಂಸ್ಥೆ ಅಡಿ ಆಯೋಜಿಸಿದ್ದ ವಿದ್ಯಾರ್ಥಿಗಳ ನಡೆ ಸಂವಿಧಾನದ ಕಡೆ ಕಾರ್ಯಕ್ರಮ ಉದ್ಘಾಟಿಸಿ ಗುರುವಾರ ಮಾತನಾಡಿದರು.
ಸಂವಿಧಾನವನ್ನು ಸರಿಯಾಗಿ ಅರ್ಥೈಸಿಕೊಳ್ಳಬೇಕು. ಇದರಿಂದ ಪ್ರತಿಯೊಬ್ಬರೂ ಸುಸಂಸ್ಕೃತ, ಸಭ್ಯ ನಾಗರಿಕರಾಗಿ ಬಾಳಲು ಸಾಧ್ಯವಾಗುತ್ತದೆ. ವಿದ್ಯಾರ್ಥಿಗಳಿಗೆ ಸಂವಿಧಾನದ ಆಶಯ ತಿಳಿಸುವುದು ಅಗತ್ಯ ಎಂದರು. 
ಮಸರಕಲ್ ಸರ್ಕಾರಿ ಪಪೂ ಕಾಲೇಜಿನ ಉಪನ್ಯಾಸಕ ರಮೇಶ ಹೆಗ್ಗಡೆ ಸುಂಕೇಶ್ವರಹಾಳ ಮಾತನಾಡಿ, ಸಂವಿಧಾನವು ಭಾರತ ಸರ್ವೋಚ್ಛ ಕಾನೂನು ಮತ್ತು ಆಡಳಿತ ಮಾರ್ಗದರ್ಶಿ ದಾಖಲೆಯಾಗಿದೆ. ಕಾರ್ಯಾಂಗ, ಶಾಸಕಾಂಗ, ನ್ಯಾಯಾಂಗ ಮತ್ತು ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳು, ರಾಜ್ಯ ನೀತಿಯ ನಿರ್ದೇಶಕ ತತ್ವಗಳನ್ನು ಸಂವಿಧಾನ ಒಳಗೊಂಡಿದೆ ಎಂದರು. 
ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಬಸವರಾಜ ಬ್ಯಾಗವಾಟ ಪ್ರಾಸ್ತಾವಿಕವಾಗಿ ಮಾತನಾಡಿದರು. ರೈತ ಸಂಘದ ಜಿಲ್ಲಾಧ್ಯಕ್ಷ ಸಂಗಮೇಶ ನಾಯಕ ಸಂವಿಧಾನ ಪೀಠಿಕೆ ಬೋಧಿಸಿದರು. ಶಾಲಾ ಗ್ರಂಥಾಲಯಕ್ಕೆ ಭಾರತದ ಸಂವಿಧಾನ, ಸಂವಿಧಾನ ಓದು ಹಾಗೂ ಸಂವಿಧಾನ ಪೀಠಿಕೆಯನ್ನು ನೀಡಲಾಯಿತು.
ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಬಸವರಾಜ ಬ್ಯಾಗವಾಟ, ಶಾಲಾ ಮುಖ್ಯಶಿಕ್ಷಕ ಲಕ್ಷ್ಮಣ ನಾಯಕ, ಎಸ್ಡಿಎಂಸಿ ಅಧ್ಯಕ್ಷೆ ಅಂಜನಮ್ಮ ಶಾಂತಕುಮಾರ, ಉಪಾಧ್ಯಕ್ಷ ರೆಹಮಾನ ಸಾಬ್, ಪ್ರಮುಖರಾದ ಚಂದ್ರಶೇಖರಯ್ಯ ಕಳ್ಳಿಮಠ, ಶಾಂಭಯ್ಯ ಸ್ವಾಮಿ ಸ್ಥಾವರಮಠ, ಶ್ಯಾಮಣ್ಣ ಗೌಡ, ಉಮೇಶ, ದಾವೂದ್, ಖಾಜಾಹುಸೇನ್, ತಾಯಪ್ಪ, ಶಾಲಾ ಪ್ರತಿನಿಧಿ ಕಾವ್ಯಾ ಚನ್ನಬಸವ, ಅತಿಥಿ ಶಿಕ್ಷಕರಾದ ರೇಣುಕಾ, ಗಂಗಾಧರ, ಗಂಗಪ್ಪ, ವಿರೂಪಾಕ್ಷಿ, ತೇಜಸ್ವಿನಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net