ದೇವದುರ್ಗ ತಾಲೂಕು ಜಾಲಹಳ್ಳಿಯಲ್ಲಿ ಸಿಪಿಐಎಂ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಗಿರಿಯಪ್ಪ ಪೂಜಾರಿ, ತಾಲೂಕು ಕಾರ್ಯದರ್ಶಿ ನರಸಣ್ಣ ನಾಯಕ, ಮುಖಂಡರಾದ ಮೌನೇಶ ದಾಸರ, ಹನುಮಂತ ಮಡಿವಾಳ, ಬಸವರಾಜ ವಂದಲಿ, ರಿಯಾಜ್ ಆರ್ತಿ, ರಂಗನಾಥ ಬುಂಕಲದೊಡ್ಡಿ, ದುರುಗಪ್ಪ ಹೊರಟ್ಟಿ ಇತರರಿದ್ದರು.
ದೇವದುರ್ಗ: ಪುಟ್ಟರಾಷ್ಟ್ರ ವೆನೆಜುವೆಲಾ ಮೇಲೆ ಅಮೆರಿಕ ವೈಮಾನಿಕ ದಾಳಿ ಖಂಡಿಸಿ ತಾಲೂಕಿನ ಜಾಲಹಳ್ಳಿ ಅಂಬೇಡ್ಕರ್ ವೃತ್ತದಲ್ಲಿ ಸಿಪಿಐಎಂ ಕಾರ್ಯಕರ್ತರು ಮಂಗಳವಾರ ಪ್ರತಿಭಟನೆ ನಡೆಸಿದರು.
ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಗಿರಿಯಪ್ಪ ಪೂಜಾರಿ ಮಾತನಾಡಿ, ಜಗತ್ತಿನ ದೈತ್ಯ ಅಮೆರಿಕ ವೈಮಾನಿಕ ದಾಳಿ ನಡೆಸಿ ಅಕ್ರಮವಾಗಿ ವೆನೆಜುವೆಲಾ ವಶಕ್ಕೆ ಪಡೆದಿರುವುದು ನಿರ್ಲಜ್ಜದ ಪರಮಾವಧಿಯಾಗಿದೆ. ವಾರದಿಂದ ಅಮೆರಿಕ ಒಕ್ಕೂಟ ದಬ್ಬಾಳಿಕೆ ಮಾಡುತ್ತಿರುವುದು ಮಾನವೀಯ ಮೇಲೆ ನಡೆದ ಘೋರ ಕೃತ್ಯವಾಗಿದೆ. ಆ ಪುಟ್ಟ ರಾಷ್ಟ್ರದಲ್ಲಿ ತನ್ನ ಆಳ್ವಿಕೆ ಬಲವಂತವಾಗಿ ತರಲು ಮಿಲಿಟರಿ ಪ್ರಯೋಗ ಮಾಡುತ್ತಿದೆ ಎಂದು ದೂರಿದರು.
ಅಮೆರಿಕದ ರಾಷ್ಟ್ರೀಯ ಭದ್ರತಾ ರಣನೀತಿ ಅಕ್ಕಪಕ್ಕದ ಸಣ್ಣಪುಟ್ಟ ರಾಷ್ಟ್ರಗಳಿಗೆ ಮಾರಕವಾಗಿ ಪರಿಣಮಿಸಿದೆ. ಅಮೆರಿಕ ತನ್ನ ಆಕ್ರಮಣ ನೀತಿಯನ್ನು ತಕ್ಷಣವೇ ಕೈಬಿಡಬೇಕು. ಕೆರೆಬಿಯನ್ ಸಮುದ್ರದಿಂದ ಎಲ್ಲ ಸೇನಾ ಪಡೆಗಳನ್ನು ವಾಪಸ್ ಪಡೆಯಬೇಕು. ಲ್ಯಾಟಿನ್ ಅಮೆರಿಕವನ್ನು ಶಾಂತಿಯ ವಲಯ ಎಂದು ಘೋಷಣೆ ಮಾಡಬೇಕು.
ಅಮೆರಿಕ ಸಾರ್ವಭೌಮ ರಾಷ್ಟ್ರಗಳ ಆಂತರಿಕ ವ್ಯವಹಾರದಲ್ಲಿ ಹಸ್ತಕ್ಷೇಪ ಮಾಡಬಾರದು. ವೆನೆಜುವೆಲಾ ಸ್ವಾತಂತ್ರ್ಯ ಆಡಳಿತಕ್ಕೆ ಅವಕಾಶ ಮಾಡಿಕೊಡಬೇಕು. ವಿಶ್ವಸಂಸ್ಥೆಯಲ್ಲಿ ಅಮೆರಿಕದ ಅಕ್ರಮಣ ನೀತಿ, ಸರ್ವಾಧಿಕಾರಿ ಧೋರಣೆಯನ್ನು ಒಕ್ಕೊರಲಿನಿಂದ ಖಂಡಿಸಬೇಕು ಎಂದು ಒತ್ತಾಯಿಸಿದರು.