ಮಸ್ಕಿ ತಾಲೂಕು ಅಸಂಘಟಿತ ಪುರೋಹಿತ ಕಾರ್ಮಿಕ ಫೆಡರೇಷನ್‌ನಿಂದ ಉಪ ತಹಸೀಲ್ದಾರ್ ಪ್ರಕಾಶ ಬುಳ್ಳಾ ಅವರಿಗೆ ಮನವಿ ಸಲ್ಲಿಸಲಾಯಿತು. ಪುರೋಹಿತರಾದ ಹನುಮೇಶಾಚಾರ್ಯ, ರಾಘವೇಂದ್ರಚಾರ್ಯ, ವೀರನಾರಾಯಣ ಪೂಜಾರ, ಶೇಖರಯ್ಯ ಸ್ವಾಮಿ, ಶರಣ ಬಸವಸ್ವಾಮಿ, ಸುಗುರಯ್ಯ ಸ್ವಾಮಿ ಇತರರಿದ್ದರು.
ಮಸ್ಕಿ: ಪುರೋಹಿತರಿಗಾಗಿ ಪ್ರತ್ಯೇಕ ಮಂಡಳಿ ರಚನೆ ಮಾಡುವಂತೆ ಮಸ್ಕಿ ತಾಲೂಕು ಅಸಂಘಟಿತ ಪುರೋಹಿತ ಕಾರ್ಮಿಕ ಫೆಡರೇಷನ್‌ನಿಂದ ಬುಧವಾರ ಉಪ ತಹಸೀಲ್ದಾರ್ ಪ್ರಕಾಶ ಬುಳ್ಳಾ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ತಾಲೂಕು ಅಧ್ಯಕ್ಷ ಹನುಮೇಶಾಚಾರ್ಯ ಮಾತನಾಡಿ, ರಾಜ್ಯದ 31ಜಿಲ್ಲೆಗಳಲ್ಲಿ ಲಕ್ಷಾಂತರ ಪುರೋಹಿತ ಕುಟುಂಬಗಳಿದ್ದು ಪ್ರತ್ಯೇಕ ಮಂಡಳಿ ರಚನೆಯಾದರೆ ಪುರೋಹಿತರ ಕಷ್ಟಗಳಿಗೆ ಸ್ಪಂದನೆ ಸಿಗಲಿದೆ.
ಈಗಾಗಲೇ ಸರ್ಕಾರಕ್ಕೆ ಮನವಿ ಮಾಡಿದ್ದು ಪುರೋಹಿತ ಸಂಘದ ಅಧ್ಯಕ್ಷ ಡಾ.ಜೆ. ಶ್ರೀನಿವಾಸಮೂರ್ತಿಯನ್ನು ಮಂಡಳಿಗೆ ಅಧ್ಯಕ್ಷರನ್ನಾಗಿ, ಹಾಗೂ ಸತೀಶ್ ಸಿಂಹ ಅವರನ್ನು ಉಪಾಧ್ಯಕ್ಷರನ್ನಾಗಿ ಸರ್ಕಾರ ನೇಮಿಸಬೇಕು ಎಂದರು.