ಅರಕೇರಾ ಬಳಿ ಹಸು ಮೇಲೆ ಚಿರತೆ ದಾಳಿ

ಅರಕೇರಾ ಪಟ್ಟಣದ ಕೆ.ಎಚ್. ನಗರದ ಹೊರವಲಯದ ಜಮೀನೊಂದರಲ್ಲಿ ಹಸು ಮೇಲೆ ಚಿರತೆ ದಾಳಿ ಮಾಡಿದ್ದರಿಂದ ಅರಣ್ಯ ಸಿಬ್ಬಂದಿ ಬೋನು ಅಳವಡಿಸಿದರು. ಸಿಬ್ಬಂದಿ ಸಗರಪ್ಪ, ಗುಡದಪ್ಪ, ಹುಸೇನ ಬಾಷಾ, ಸಂಗಪ್ಪ, ಎಂ.ಡಿ. ಬಾಬು ಇದ್ದರು.
ಅರಕೇರಾ ಪಟ್ಟಣದ ಕೆ.ಎಚ್. ನಗರದ ಹೊರವಲಯದ ಜಮೀನೊಂದರಲ್ಲಿ ಹಸು ಮೇಲೆ ಚಿರತೆ ದಾಳಿ ಮಾಡಿದ್ದರಿಂದ ಅರಣ್ಯ ಸಿಬ್ಬಂದಿ ಬೋನು ಅಳವಡಿಸಿದರು. ಸಿಬ್ಬಂದಿ ಸಗರಪ್ಪ, ಗುಡದಪ್ಪ, ಹುಸೇನ ಬಾಷಾ, ಸಂಗಪ್ಪ, ಎಂ.ಡಿ. ಬಾಬು ಇದ್ದರು.
Published on
ಅರಕೇರಾ: ಪಟ್ಟಣದ ಕೆ.ಎಚ್. ನಗರದ ಹೊರವಲಯದ ಜಮೀನೊಂದರಲ್ಲಿ ಸೋಮವಾರ ರಾತ್ರಿ ಚಿರತೆಯು ಹಸು ಮೇಲೆ ದಾಳಿ ನಡೆಸಿ ಬಲಿ ಪಡೆದಿದ್ದು, ಗ್ರಾಮಸ್ಥರಲ್ಲಿ ಭಯ ಆವರಿಸಿದೆ. 
ಹುಸೇನ್ ಬಾಷಾ ಎಂಬುವರ ಹಸುವಿನ ಹೊಟ್ಟೆ ಭಾಗವನ್ನು ಬಗೆದು ತಿಂದಿದೆ. ಸ್ಥಳಕ್ಕೆ ಅರಣ್ಯ ಸಿಬ್ಬಂದಿ ಮಂಗಳವಾರ ಭೇಟಿ ನೀಡಿ ಪರಿಶೀಲನೆ ನಡೆಸಿ, ಬೋನು ಹಾಗೂ ಸಿಸಿ ಕ್ಯಾಮರಾಗಳನ್ನು ಅಳವಡಿಸಿ ಚಿರತೆಯ ಚಲನವಲನದ ಮೇಲೆ ನಿಗಾ ವಹಿಸಿದ್ದಾರೆ. 
ಮೂರ‌್ನಾಲ್ಕು ತಿಂಗಳ ಹಿಂದೆಯಷ್ಟೆ ಕೊತ್ತದೊಡ್ಡಿ, ಬಿ.ಗಣೇಕಲ್, ಅರಕೇರಾ ವ್ಯಾಪ್ತಿಯಲ್ಲಿ ಚಿರತೆ ಕಾಣಿಸಿಕೊಂಡಿತ್ತು. ಚಿರತೆ ಸೆರೆಗೆ ಅರಣ್ಯ ಸಿಬ್ಬಂದಿ ನಿರಂತರ ಕಾರ್ಯಾಚರಣೆ ನಡೆಸಿದರೂ ಪ್ರಯೋಜನವಾಗಿಲ್ಲ. ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು. 
ಸಾಕು ಪ್ರಾಣಿಗಳ ಸುರಕ್ಷಿತೆಗೆ ಗಮನಹರಿಸಬೇಕು ಎಂದು ಅಧಿಕಾರಿಗಳು ಸೂಚನೆ ನೀಡಿದ್ದಾರೆ. ಅರಣ್ಯ ಸಿಬ್ಬಂದಿ ಸಗರಪ್ಪ, ಗುಡದಪ್ಪ, ಹುಸೇನ ಬಾಷಾ, ಸಂಗಪ್ಪ, ಎಂ.ಡಿ. ಬಾಬು ಇದ್ದರು. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net