ಬಿ.ಗುಡಿಯ ಕೆಬಿಜೆಎನ್‌ಎಲ್ ಸಿಇ ಅಭಿಮಾನ್ಯು ಶೃಂಗೇರಿಗೆ ರಾಜ್ಯ ರೈತ ಸಂಘದಿಂದ ಮನವಿ ಸಲ್ಲಿಸಲಾಯಿತು. ತಾಲೂಕು ಅಧ್ಯಕ್ಷ ಹಾಜಿ ಮಸ್ತಾನ್ ಬಿ.ಗಣೇಕಲ್, ಪ್ರಮುಖರಾದ ಶರಣು ಮಂದಾರವಾಡ, ಮುದ್ದಣ್ಣ ನಾಯಕ, ತಿಪ್ಪಣ್ಣ ನಾಯಕ ಇತರರಿದ್ದರು.ಬಿ.ಗುಡಿಯ ಕೆಬಿಜೆಎನ್‌ಎಲ್ ಸಿಇ ಅಭಿಮಾನ್ಯು ಶೃಂಗೇರಿಗೆ ರಾಜ್ಯ ರೈತ ಸಂಘದಿಂದ ಮನವಿ ಸಲ್ಲಿಸಲಾಯಿತು. ತಾಲೂಕು ಅಧ್ಯಕ್ಷ ಹಾಜಿ ಮಸ್ತಾನ್ ಬಿ.ಗಣೇಕಲ್, ಪ್ರಮುಖರಾದ ಶರಣು ಮಂದಾರವಾಡ, ಮುದ್ದಣ್ಣ ನಾಯಕ, ತಿಪ್ಪಣ್ಣ ನಾಯಕ ಇತರರಿದ್ದರು.
ದೇವದುರ್ಗ: ಬೆಳೆ ರಕ್ಷಣೆಗೆ ಬಲದಂಡೆ ನಾಲೆಗೆ ಒಂದು ತಿಂಗಳ ಕಾಲ ವಾರಬಂದಿ ಹಾಕದೆ ನಿರಂತರ ನೀರು ಹರಿಸಬೇಕೆಂದು ಒತ್ತಾಯಿಸಿ ರಾಜ್ಯ ರೈತ ಸಂಘದಿಂದ ಶುಕ್ರವಾರ ಬಿ.ಗುಡಿ ಕೆಬಿಜೆಎನ್‌ಎಲ್ ಕಚೇರಿಯಲ್ಲಿ ಸಿಇ ಅಭಿಮಾನ್ಯು ಶೃಂಗೇರಿಗೆ ಮನವಿ ಸಲ್ಲಿಸಲಾಯಿತು.
ಬರಗಾಲದ ನಡುವೆ ನಾರಾಯಣಪುರ ಜಲಾಶಯದ ಬಲದಂಡೆ ನಾಲೆ ನೀರು ನಂಬಿ ಲಿಂಗಸುಗೂರು, ದೇವದುರ್ಗ ಹಾಗೂ ರಾಯಚೂರು ತಾಲೂಕಿನ ರೈತರು ಮೆಣಸಿನಕಾಯಿ, ಹತ್ತಿ, ತೊಗರಿ, ಶೇಂಗಾ ಸೇರಿ ವಿವಿಧ ಬೆಳೆಗಳ ಬಿತ್ತನೆಗೆ ಸಿದ್ಧತೆ ನಡೆಸಿದ್ದಾರೆ. ನಾಲೆಗೆ ನೀರು ಹರಿಸಲಾಗಿದೆ. 14 ದಿನದ ನಂತರ ಬಂದ್ ಮಾಡುವ ಸಾಧ್ಯತೆ ಇದ್ದು, ಟೇಲೆಂಡ್ ಭಾಗಕ್ಕೆ ಸಮರ್ಪಕವಾಗಿ ನೀರು ಬರುತ್ತಿಲ್ಲ. 14ದಿನದ ನಂತರ 10ದಿನ ವಾರಬಂದಿ ಹಾಕಿ ನೀರು ಕಡಿತಮಾಡಿದರೆ ಕೊನೇ ಭಾಗದಲ್ಲಿ ಬೆಳೆ ಹಾಳಾಗಿ ಕೋಟ್ಯಂತರ ರೂ. ನಷ್ಟವಾಗಲಿದೆ ಎಂದು ದೂರಿದರು.
ಒಳಹರಿವು ಇರುವವರೆಗೆ ವಾರಬಂದಿ ಹಾಕದೆ ಬಲದಂಡೆ ನಾಲೆಗೆ ಸತತ ಒಂದು ತಿಂಗಳ ಕಾಲ ನೀರು ಹರಿಸಬೇಕು. ಮೇಲ್ಭಾಗದಲ್ಲಿ ಗೇಜ್ ಕಾಪಾಡಿ ಟೇಲೆಂಡ್‌ಗೆ ನೀರು ತಲುಪಿಸಬೇಕು. ನೀರು ಪೋಲಾಗದಂತೆ ನಿಗಾವಹಿಸಲು ಇಂಜಿನಿಯರ್‌ಗಳು ನೌಕರರಿಗೆ ಸೂಚಿಸಬೇಕು. ನಾಲೆಯಲ್ಲಿ ಹೂಳು ತೆರವು ಮಾಡಿ, ಜಂಗಲ್ ಕಟಿಂಗ್ ಕೈಗೊಂಡು ಕೊನೇ ಭಾಗಕ್ಕೆ ನೀರು ಹರಿಸಬೇಕು ಎಂದು ಒತ್ತಾಯಿಸಿದರು.
ಸಂಘದ ತಾಲೂಕು ಅಧ್ಯಕ್ಷ ಹಾಜಿ ಮಸ್ತಾನ್ ಬಿ.ಗಣೇಕಲ್, ಪ್ರಮುಖರಾದ ಶರಣು ಮಂದಾರವಾಡ, ಮುದ್ದಣ್ಣ ನಾಯಕ, ತಿಪ್ಪಣ್ಣ ನಾಯಕ ಇತರರಿದ್ದರು.