ಜಾಲತಾಣ ಬಿಡಿ ಕನ್ನಡ ಸಾಹಿತ್ಯ ಓದಿ

ದೇವದುರ್ಗದ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ದತ್ತಿನಿಧಿ ಕಾರ್ಯಕ್ರಮದಲ್ಲಿ ಸಾಹಿತಿ ಶಂಕರರಾವ್ ಉಭಾಳೆ, ಮುಖ್ಯಶಿಕ್ಷಕ ಮೃತ್ಯುಂಜಯ ಅವರನ್ನು ಸನ್ಮಾನಿಸಲಾಯಿತು. ಕಸಾಪ ಜಿಲ್ಲಾಧ್ಯಕ್ಷ ರಂಗಣ್ಣ ಪಾಟೀಲ್ ಅಳ್ಳುಂಡಿ, ಉಪನ್ಯಾಸಕ ಸಿದ್ದಪ್ಪ ಕಂಬಳಿ, ತಾಲೂಕು ಅಧ್ಯಕ್ಷ ಎಚ್.ಶಿವರಾಜ, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಹನುಮಂತ್ರಾಯ ಶಾಖೆ ಇತರರಿದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಕನ್ನಡ ಸಾಹಿತ್ಯ

ಜಾಲತಾಣ ಬಿಡಿ ಕನ್ನಡ ಸಾಹಿತ್ಯ ಓದಿ

ದೇವದುರ್ಗ: ಶಾಲಾ ಕಾಲೇಜಿನ ವಿದ್ಯಾರ್ಥಿಗಳು ಮೊಬೈಲ್, ಟಿವಿ, ಸಾಮಾಜಿಕ ಜಾಲತಾಣದಲ್ಲಿ ಕಾಲ ಕಳೆಯದೇ ಸಾಹಿತ್ಯ ಓದುವ ಹವ್ಯಾಸ ರೂಢಿಸಿಕೊಳ್ಳಬೇಕು ಎಂದು ಕಸಾಪ ಜಿಲ್ಲಾಧ್ಯಕ್ಷ ರಂಗಣ್ಣ ಪಾಟೀಲ್ ಅಳ್ಳುಂಡಿ ಹೇಳಿದರು.
ಪಟ್ಟಣದ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಮಂಗಳವಾರ ಆಯೋಜಿಸಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು. ಕಸಾಪಗೆ ದತ್ತಿದಾನಿಗಳೇ ಜೀವಾಳ ಇದ್ದಂತೆ. ಅವರ ಸಹಕಾರದಿಂದ ದತ್ತಿ ಉಪನ್ಯಾಸ ಆಯೋಜಿಸಿ ಶಾಲಾ ಕಾಲೇಜುಗಳಲ್ಲಿ ಸಾಹಿತ್ಯ ಪಸರಿಸಲಾಗುತ್ತಿದೆ. ತಂತ್ರಾಜ್ಞಾನ ಪ್ರಭಾವದಿಂದ ಓದುಗರ ಸಂಖ್ಯೆ ಕುಸಿಯುತ್ತಿರುವುದು ಕಳವಳಕಾರಿ. ಯುವಕರು ಸಾಹಿತ್ಯ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದರು.
ಉಪನ್ಯಾಸಕ ಶಿವಲಿಂಗಪ್ಪ ಮಾತನಾಡಿ, ಭಾರತ ಬೃಹತ್ ಪ್ರಜಾಪ್ರಭುತ್ವ ರಾಷ್ಟ್ರವಾಗಿದ್ದು, ಇಲ್ಲಿ ಮತದಾರರೇ ಪ್ರಭುಗಳು, ಜನಪ್ರತಿನಿಧಿಗಳೇ ಸೇವಕರು. ಆದರೆ, ಬದಲಾದ ಪರಿಸ್ಥಿತಿಯಲ್ಲಿ ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ವಂಶಾಡಳಿತ ಹೆಚ್ಚಾಗಿದ್ದು ದುರಂತ. ಮತಾಧಿಕಾರಿ ಪ್ರಜೆಯ ಸಾರ್ವಭೌಮ ಅಧಿಕಾರ ಎನ್ನುವುದು ಚುನಾವಣೆಯಲ್ಲಿ ಸಾಬೀತುಪಡಿಸಬೇಕು ಎಂದು ತಿಳಿಸಿದರು.
ಉಪನ್ಯಾಸಕ ಸಿದ್ದಪ್ಪ ಕಂಬಳಿ, ಸಾಹಿತಿ ಶಂಕರರಾವ್ ಉಭಾಳೆ, ಕಸಪ ತಾಲೂಕು ಅಧ್ಯಕ್ಷ ಎಚ್.ಶಿವರಾಜ, ನೌಕರರ ಸಂಘದ ತಾಲೂಕು ಅಧ್ಯಕ್ಷ ಹನುಮಂತ್ರಾಯ ಶಾಖೆ, ಮುಖ್ಯಶಿಕ್ಷಕ ಮೃತ್ಯುಂಜಯ ಕೋಟೆ, ಶಿಕ್ಷಕರಾದ ಯಲ್ಲನಗೌಡ, ಆದಿಮಮತಾ, ರಾಘವೇಂದ್ರ, ಶ್ಯಾಮಸುಂದರ್, ಜಂಬಣ್ಣ, ಮಹೇಂದ್ರ ಮ್ಯಾತ್ರಿ, ಆಕಾಶ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net