ಕರೆಗುಡ್ಡ ಗ್ರಾಮಕ್ಕೆ ಬಸ್ ಬಿಡಿ

ಮಾನ್ವಿ ಪಟ್ಟಣದ ಸಾರಿಗೆ ಡಿಪೋದಲ್ಲಿ ವ್ಯವಸ್ಥಾಪಕ ನಾಗರಾಜಗೆ ದಲಿತ ವಿದ್ಯಾರ್ಥಿ ಪರಿಷತ್ ತಾಲೂಕು ಘಟಕ ಸೋಮವಾರ ಮನವಿ ಸಲ್ಲಿಸಿತು. ತಾಲೂಕು ಅಧ್ಯಕ್ಷ ಬಂಡೆಗುರು, ಪೀರ್‌ಬಾಷಾ, ಮಹಾಂತೇಶ್, ಪುನೀತ್, ನಿಂಗಯ್ಯ, ಬಸವರಾಜ ಇದ್ದರು.
ಮಾನ್ವಿ ಪಟ್ಟಣದ ಸಾರಿಗೆ ಡಿಪೋದಲ್ಲಿ ವ್ಯವಸ್ಥಾಪಕ ನಾಗರಾಜಗೆ ದಲಿತ ವಿದ್ಯಾರ್ಥಿ ಪರಿಷತ್ ತಾಲೂಕು ಘಟಕ ಸೋಮವಾರ ಮನವಿ ಸಲ್ಲಿಸಿತು. ತಾಲೂಕು ಅಧ್ಯಕ್ಷ ಬಂಡೆಗುರು, ಪೀರ್‌ಬಾಷಾ, ಮಹಾಂತೇಶ್, ಪುನೀತ್, ನಿಂಗಯ್ಯ, ಬಸವರಾಜ ಇದ್ದರು.
Published on
ಮಾನ್ವಿ: ಕರೆಗುಡ್ಡ ಗ್ರಾಮಕ್ಕೆ ಬಸ್ ಬಿಡಬೇಕೆಂದು ಆಗ್ರಹಿಸಿ ದಲಿತ ವಿದ್ಯಾರ್ಥಿ ಪರಿಷತ್ ತಾಲೂಕು ಘಟಕದಿಂದ ಸಾರಿಗೆ ಡಿಪೋ ವ್ಯವಸ್ಥಾಪಕ ನಾಗರಾಜಗೆ ಮನವಿ ಸಲ್ಲಿಸಲಾಯಿತು. 
ಶಾಲಾ ಕಾಲೇಜುಗಳಿಗೆ ಹಳ್ಳಿ ವಿದ್ಯಾರ್ಥಿಗಳು ಮತ್ತು ವಿವಿಧ ಕೆಲಸಗಳಿಗಾಗಿ ಜನರು ಪಟ್ಟಣಕ್ಕೆ ಬಂದು ಹೋಗುತ್ತಾರೆ. ಆದರೆ, ಸಮರ್ಪಕ ಬಸ್ ವ್ಯವಸ್ಥೆ ಇಲ್ಲದ ಕಾರಣ ತೊಂದರೆ ಅನುಭವಿಸುತ್ತಿದ್ದಾರೆ. ಆದ್ದರಿಂದ ಬೆಳಗ್ಗೆ ಶಾಲಾ-ಕಾಲೇಜು ಸಮಯಕ್ಕೆ ಪೂರಕವಾಗಿ ಹಾಗೂ ಮರಳಿ ಗ್ರಾಮಗಳಿಗೆ ತೆರಳುವುದಕ್ಕೆ ಅನುಕೂಲವಾಗುವಂತೆ ಬಸ್ ವ್ಯವಸ್ಥೆ ಮಾಡಬೇಕು. 
ಕರೆಗುಡ್ಡ ಗ್ರಾಮದ ವಿದ್ಯಾರ್ಥಿಗಳಿಗೆ ಅನೂಕುಲವಾಗುವಂತೆ ಮಾನ್ವಿ ಬಸ್ ನಿಲ್ದಾಣದಿಂದ ಪ್ರತಿದಿನ ಮಧ್ಯಾಹ್ನ 1:30ಕ್ಕೆ ಬಸ್ ಬಿಡಬೇಕೆಂದು ಒತ್ತಾಯಿಸಿದರು. ಪರಿಷತ್ ತಾಲೂಕು ಅಧ್ಯಕ್ಷ ಬಂಡೆಗುರು, ಪೀರ್‌ಬಾಷಾ, ಮಹಾಂತೇಶ್, ಪುನೀತ್, ನಿಂಗಯ್ಯ, ಬಸವರಾಜ ಇದ್ದರು. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net