ತಾಲೂಕು ಹಿರಿಯ ಆರೋಗ್ಯ ಸಹಾಯಕ ಸಂಗನಗೌಡ ಪಾಟೀಲ್ ಮಾತನಾಡಿ, ಹೆಚ್ಚಿನ ಸಂದರ್ಭಗಳಲ್ಲಿ ಹಾವು ಕಡಿತಕ್ಕೊಳಗಾದ ತಕ್ಷಣ ಜನರು ತೀವ್ರ ಆತಂಕಕ್ಕೆ ಒಳಗಾಗಿ, ವೈಜ್ಞಾನಿಕ ಚಿಕಿತ್ಸೆಯನ್ನು ಮರೆತು ಸ್ಥಳೀಯ ಮಾಂತ್ರಿಕರ ಹತ್ತಿರ ಓಡುವುದು ಇಂದಿಗೂ ಕಂಡುಬರುತ್ತಿದೆ. ನಾಟಿ ವೈದ್ಯರ ಬಳಿ ಹೋಗಿ ಬೇರು ಕುಡಿಸುವುದು, ಮಂತ್ರಿಸುವುದು ಹಾಗೂ ಅರ್ಹತೆಯಿಲ್ಲದ ಅನಧಿಕೃತ ವ್ಯಕ್ತಿಗಳ ಹತ್ತಿರ ಹೋಗಿ ಅವೈಜ್ಞಾನಿಕ ಚಿಕಿತ್ಸೆ ಕೊಡಿಸುವುದರಿಂದ ಅಮೂಲ್ಯವಾದ ಸಮಯ ವ್ಯರ್ಥವಾಗುತ್ತದೆ ಎಂದರು.