ಸಮಾಜದಲ್ಲಿ ಬದುಕುವ ರೀತಿ ಕಲಿಯಿರಿ

ಲಿಂಗಸುಗೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಂಗಳವಾರ ಏರ್ಪಡಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ತಹಸೀಲ್ದಾರ್ ಸತ್ಯಮ್ಮ ಉದ್ಘಾಟಿಸಿದರು. ಪ್ರಾಚಾರ್ಯ ಡಾ.ವೆಂಕಟನಾರಾಯಣ, ವಿಶ್ರಾಂತ ಪ್ರಾಚಾರ್ಯೆ ಗಂಗಮ್ಮ ಸತ್ಯಂಪೇಟೆ, ಸಹ ಪ್ರಾಧ್ಯಾಪಕ ಡಾ. ಹನುಮಂತಪ್ಪ, ಉಪನ್ಯಾಸಕ ಡಾ. ಮಹಾದೇವಪ್ಪ ನಾಗರಾಳ ಇತರರಿದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಗ್ರಾಮೀಣ
  • ನಗರ
  • ಅಕ್ಷರಸ್ಥ
ಲಿಂಗಸುಗೂರು: ಮಹಿಳೆ ಅಬಲೆ ಅಲ್ಲ, ಸಬಲೆ ಎನ್ನುವುದನ್ನು ನಿರೂಪಿಸುತ್ತಿರುವ ಈ ಕಾಲಘಟ್ಟದಲ್ಲಿ ವಿದ್ಯಾರ್ಥಿನಿಯರು ಓದಿನೊಂದಿಗೆ ಸಮಾಜದಲ್ಲಿ ಬದುಕುವ ರೀತಿಯನ್ನು ಕಲಿಯಬೇಕಿದೆ ಎಂದು ತಹಸೀಲ್ದಾರ್ ಸತ್ಯಮ್ಮ ಹೇಳಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಗ್ರಾಮೀಣ, ನಗರ, ಅಕ್ಷರಸ್ಥ-ಅನಕ್ಷರಸ್ಥ ಮಹಿಳೆ ಎಂಬ ಭೇದ ಸಲ್ಲದು. ಅದರ ಆಚೆ ಮಹಿಳಾ ಚಿಂತನೆ ಅಗತ್ಯವಾಗಿದೆ. ಎಲ್ಲ ಕ್ಷೇತ್ರದಲ್ಲಿಯೂ ಮಹಿಳೆಯರು ಮುಂಚೂಣಿಯಲ್ಲಿದ್ದಾರೆ.
ಅಂತರಂಗದ ಅರಿವಿನೊಂದಿಗೆ ಸಂಸ್ಕಾರವಂತರಾಗಿ ಉತ್ತಮ ಸಮಾಜ ನಿರ್ಮಿಸುವ ಹೊಣೆಗಾರಿಕೆ ಮಹಿಳೆಯರ ಮೇಲಿದೆ. ನಾಟ್ಯ, ಮನರಂಜನೆ, ಸ್ವಾತಂತ್ರ್ಯ ಹಲವು ಬಗೆಯ ಹಕ್ಕುಗಳು ಸಂವಿಧಾನದತ್ತವಾಗಿವೆ. ಈ ಸೂಕ್ಷ್ಮತೆಯ ಭಾವದಿಂದ ಸಾಗಬೇಕಿದೆ ಎಂದರು.
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ ಹಟ್ಟಿಯ ಬರ‌್ರಕಥಾ ಕಮಲಮ್ಮ ಮತ್ತು ಲಿಂಗಸುಗೂರು ಪುರಸಭೆ ಪೌರಕಾರ್ಮಿಕ ಮಹಿಳೆ ಅಂಜುಳಾ ಅವರನ್ನು ಸನ್ಮಾನಿಸಲಾಯಿತು. ಐಕ್ಯೂಎಸಿ ಸಂಯೋಜಕ ಗಣೇಶ ದರ್ಬಿ, ಮಹಿಳಾ ಕೋಶ ಸಂಚಾಲಕಿ ಜ್ಯೋತಿಲಕ್ಷ್ಮೀ ಪಾಟೀಲ್, ಸಹಾಯಕ ಪ್ರಾಧ್ಯಾಪಕರಾದ ಸರಿತಾ ಇಂಚೂರ, ನಜ್ಮಾಬೇಗಂ, ಉಪನ್ಯಾಸಕರಾದ ಝಾನ್ಸಿ ರಾಣಿ, ಪುಷ್ಪಾ, ವಿಜಯಲಕ್ಷ್ಮೀ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net