ಕಾಯಕ ದಾಸೋಹ ತತ್ವ ಪಾಲಿಸಿ

ಮಾನ್ವಿ ತಹಸಿಲ್ ಕಚೇರಿಯಲ್ಲಿ ಸೋಮವಾರ ದೇವರ ದಾಸಿಮಯ್ಯ ಜಯಂತಿ ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಭೀಮರಾಯ ರಾಮಸಮುದ್ರ, ಪ್ರಮುಖರಾದ ಗುಮ್ಮ ಬಸವರಾಜ ವಕೀಲ, ಕೆ.ನರಸಿಂಹ, ಗಂಗಾಧರ ಮಸ್ಕಿ, ಜಿ.ಶಿವಕುಮಾರ ಇತರರಿದ್ದರು.
ಮಾನ್ವಿ ತಹಸಿಲ್ ಕಚೇರಿಯಲ್ಲಿ ಸೋಮವಾರ ದೇವರ ದಾಸಿಮಯ್ಯ ಜಯಂತಿ ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಭೀಮರಾಯ ರಾಮಸಮುದ್ರ, ಪ್ರಮುಖರಾದ ಗುಮ್ಮ ಬಸವರಾಜ ವಕೀಲ, ಕೆ.ನರಸಿಂಹ, ಗಂಗಾಧರ ಮಸ್ಕಿ, ಜಿ.ಶಿವಕುಮಾರ ಇತರರಿದ್ದರು.
Published on
ಮಾನ್ವಿ: ಶಿವಶರಣ ದೇವರ ದಾಸಿಮಯ್ಯ ಸೇರಿದಂತೆ ವಚನಕಾರರು ಕಾಯಕ, ದಾಸೋಹಕ್ಕೆ ಮಹತ್ವ ನೀಡಿದರು. ಅವರ ತತ್ವಾದರ್ಶಗಳನ್ನು ಪ್ರತಿಯೊಬ್ಬರೂ ಪಾಲಿಸಬೇಕು ಎಂದು ತಹಸೀಲ್ದಾರ್ ಭೀಮರಾಯ ರಾಮುಸಮುದ್ರ ಹೇಳಿದರು.
ಪಟ್ಟಣದ ತಹಸಿಲ್ ಕಚೇರಿಯಲ್ಲಿ ಸೋಮವಾರ ಶಿವಶರಣ ದೇವರ ದಾಸಿಮಯ್ಯ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಬಸವಾದಿ ಶರಣರು ಈ ನಾಡಿಗೆ ವಚನಗಳ ಮೂಲಕ ಹೊಸ ಜೀವನ ಕಲ್ಪಿಸಿದ್ದಾರೆ ಎಂದರು.
ತಾಲೂಕು ನೇಕಾರ ಸಮುದಾಯಗಳ ಒಕ್ಕೂಟದ ಅಧ್ಯಕ್ಷ ಕೆ.ಈ.ನರಸಿಂಹ ಮಾತನಾಡಿ, ವಚನ ಸಾಹಿತ್ಯ ಜಾಗತಿಕ ಮಹತ್ವ ಪಡೆದಿದೆ. ಅದರಲ್ಲೂ ದೇವರ ದಾಸಿಮಯ್ಯ ವಚನಗಳು ಸಮಾಜದ ಸರ್ವರ ಬದುಕಿನ ಸಮಸ್ಯೆಗಳನ್ನು ನಿವಾರಿಸಲು ಸಹಕಾರಿಯಾಗಿವೆ ಎಂದರು.
ನೇಕಾರ ಸಮುದಾಯದ ಗುಮ್ಮಾ ಬಸವರಾಜ ವಕೀಲ, ಗಂಗಾಧರ ಮಸ್ಕಿ, ಜಿ.ಶಿವಕುಮಾರ, ಜಿ.ಪ್ರೇಮಕುಮಾರ, ಸತೀಶಕುಮಾರ, ಪ್ರದೀಪ್, ರವಿಕುಮಾರ, ಮಾರ್ಕಂಡಯ್ಯ, ಸಿದ್ರಾಮ ಬುದ್ದಿ, ಸುಶೀಲಮ್ಮ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net