_1781279869074.webp?w=480&auto=format%2Ccompress&fit=max)
_1781279869074.webp?w=480&auto=format%2Ccompress&fit=max)
ರಾಯಚೂರು ದಲಿತಕವಿ ದಿ.ಬೋಳಬಂಡಪ್ಪ ನವರ ಕ್ರಾಂತಿ ನಿನಾದಿಸಲಿ ಕವನ ಸಂಕಲನ ಹಾಗೂ ಸನ್ಮಾನ ಸಮಾರಂಭ ಜೂ.14 ರಂದು ಬೆಳಗ್ಗೆ 10 ಗಂಟೆಗೆ ನಗರದ ಕನ್ನಡ ಭವನದಲ್ಲಿ ಆಯೋಜಿಸಲಾಗಿದೆಂದು ಕವಿ ಬೋಳಬಂಡೆಪ್ಪ ಸಾಮಾಜಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ ಅಧ್ಯಕ್ಷ ಮಧುಕಾಂತ ಬೋಳಬಂಡೆಪ್ಪ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾರ್ಯಕ್ರಮವನ್ನು ಸಾಹಿತಿ ಅಲ್ಲಂಪ್ರಭು ಬೆಟ್ಟದೂರು ಉದ್ಘಾಟಿಸಲಿದ್ದಾರೆ. ಕವನ ಸಂಕಲವನ್ನು ಜನಕವಿ ದಾನಪ್ಪ ಮಸ್ಕಿ ಬಿಡುಗಡೆಗೊಳಿಸಲಿದ್ದಾರೆ. ಅಧ್ಯಕ್ಷತೆಯನ್ನು ಸಾಹಿತಿ ಬಾಬು ಭಂಡಾರಿಗಲ್ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಭತ್ ರಾಜ ನಿಜಾಮಕಾರಿ, ಆಂಜಿನೇಯ ಜಾಲಿಬೆಂಚಿ, ವೀರ ಹನುಮಾನ, ಎಸ್.ಮಾರೆಪ್ಪ ವಕೀಲ, ಎಂ.ವಿರೂಪಾಕ್ಷಿ ಹೊಸೂರು ಹಾಗೂ ಗಂಗಮ್ಮ ಬೊಳಬಂಡೆಪ್ಪ ಇವರು ಭಾಗವಹಿಸಲಿದ್ದಾರೆ.
ಈ ಸಂದರ್ಭದಲ್ಲಿ ಟ್ರಸ್ಟ್ ಕಾರ್ಯದರ್ಶಿ ಬಸವರಾಜ ಬ್ಯಾಗವಾಟ, ಶಾಂತಕುಮಾರ ಇದ್ದರು.