ಕೋಡಿ ಬಿದ್ದ ಕೆರೆ

ಸಿಂಧನೂರು ತಾಲೂಕಿನ ಊಮಲೂಟಿ ಗ್ರಾಮದಲ್ಲಿನ ಹೊರ ಕೆರೆ ತುಂಬಿ ಕೋಡಿ ಬಿದ್ದಿದ್ದು ಜನರು ಮೀನು ಹಿಡಿಯುತ್ತಿರುವುದು.
ಸಿಂಧನೂರು ತಾಲೂಕಿನ ಊಮಲೂಟಿ ಗ್ರಾಮದಲ್ಲಿನ ಹೊರ ಕೆರೆ ತುಂಬಿ ಕೋಡಿ ಬಿದ್ದಿದ್ದು ಜನರು ಮೀನು ಹಿಡಿಯುತ್ತಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • ಮೀನು ಹಿಡಿಯಲು ಮುಂದಾದ ಜನ
  • ಸಿಂಧನೂರು ಉಮಲೂಟಿ ರೈತರಿಗೆ ಸಂತಸ
ಸಿಂಧನೂರು: ತಾಲೂಕಿನ ಕೊನೆ ಗ್ರಾಮ ಊಮಲೂಟಿಯಲ್ಲಿ ಹೊಸ ಕೆರೆ ತುಂಬಿ ಕೋಡಿ ಬಿದ್ದಿದ್ದು, ಕೋಡಿ ನೀರಿನಲ್ಲಿ ಜನರು ಮೀನುಗಳನ್ನು ಹಿಡಿಯಲು ಮುಂದಾದರು.
ಗ್ರಾಮದಲ್ಲಿ 60 ವರ್ಷದಿಂದ ಹಿಂದೆ ನಿರ್ಮಾಣವಾಗಿರುವ 160 ಎಕರೆ ಪ್ರದೇಶದ ಹೊಸ ಕೆರೆ ಸತತ ಮಳೆಯಿಂದ ತುಂಬಿದ್ದು, ಬುಧವಾರ ಬೆಳಗ್ಗೆ ಕೋಡಿ ಬಿದ್ದಿದೆ. ಇದರಿಂದ ಜನರು ಕೆರೆ ಬಳಿ ಹೋಗಿ, ಬಲೆ ಬೀಸಿ ಮೀನುಗಳನ್ನು ಹಿಡಿಯುತ್ತಿರುವುದು ಕಂಡುಬಂತು. ಕೆರೆ ಕೋಡಿ ಬಿದ್ದಿರುವುದರಿಂದ ಹೊಲಗಳಲ್ಲಿರುವ ಕೊಳವೆಬಾವಿಗಳ ಅಂತರ್ಜಲಕ್ಕೆ ಇಂಬು ನೀಡಿದ್ದು, ರೈತರಿಗೆ ಸಂತಸ ಮೂಡಿಸಿದೆ. ಯಾವುದೇ ಜಮೀನುಗಳಿಗೆ ತೊಂದರೆ ಆಗಿಲ್ಲ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net