ಏ.2 ರಿಂದ 6 ವರೆಗೆ ಜ್ಞಾನ ಸತ್ರ ಕಾರ್ಯಕ್ರಮ

surendra acharya
surendra acharya
Published on
ರಾಯಚೂರು ಶ್ರೀ ಸುಶಮೀಂದ್ರ ತೀರ್ಥರ ಸೇವಾ ಸಮಿತಿ ಹಾಗೂ ಶ್ರೀ ಸುವಿದ್ಯೆಂದ್ರ ತೀರ್ಥರ ಭಕ್ತರ ವೃಂದ ಸಹಯೋಗದೊಂದಿಗೆ ಶ್ರೀ ಸುಶಮೀಂದ್ರ ತೀರ್ಥರ ಜನ್ಮ ಶತಮನೋತ್ಸವ ಹಾಗೂ 18 ನೇ ಮಹಾಸಮಾರಾಧನೆ, ಶ್ರೀ ಸುವಿದ್ಯೆಂದ್ರ ತೀರ್ಥರ 25ನೇ ವರ್ಷ ಪಟ್ಟಾಭೀಷೇಕ ಮಹೋತ್ಸವ ಅಂಗವಾಗಿನಗರದ ಮುಂಗ್ಲಿ ಪ್ರಾಣದೇವರ ದೇವಸ್ಥಾನದಲ್ಲಿ ಏ.2 ರಿಂದ ಏ.6 ವರೆಗೆ ಜ್ಞಾನ ಸತ್ರ ಕಾರ್ಯಕ್ರಮ ಆಯೋಜಿಸಲಾಗಿದೆಂದು ಸಮಿತಿ ಮುಖ್ಯಸ್ಥ ಸುರೇಂದ್ರ ಆಚಾರ್ಯ ಕೊರ್ತಕುಂದ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಏ.2 ರಂದು ಸಂಜೆ 6 .30 ಗಂಟೆಗೆ ಗೋಪೂಜೆ, ಧ್ವಜಾರೋಹಣ, ಧಾನ್ಯ ಪೂಜೆ, ಸಾಖೋತ್ಸವದೊಂದಿಗೆ ಕಾರ್ಯಕ್ರಮ ಚಾಲನೆ ಪಡೆಯಲಿದೆ. ಶ್ರೀ ಸುವಿದ್ಯೆಂದ್ರ ತೀರ್ಥರು ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ಪ್ರಾರಂಭವಾಗಲಿದೆ. ಕಾರ್ಯಕ್ರಮವನ್ನು ಡಾ.ಜಯತೀರ್ಥ ಜೋಷಿ ಉದ್ಘಾಟಿಸಲಿದ್ದಾರೆ. ಪಂಡಿತ ಖೇಡಾವೇದವ್ಯಾಸಾಚಾರ್‌ರಿಂದ ಪ್ರವಚನ ನಡೆಯಲಿದೆ. ನಂತರ ಶ್ರೀಗಳಿಂದ ಅನುಗ್ರಹ ಸಂದೇಶ ನಡೆಯಲಿದೆ ಎಂದರು.
ಏ.3 ರಂದು ಗಣಹೋಮ, ಪವಮಾನ ಹೋ ಮ, ಸಂಸ್ಥಾನ ಪೂಜೆ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 6 ಗಂಟೆಗೆ ಮಹಾಭಾರತ ಕುರಿತು ಪ್ರಶ್ನೆ ತ್ತರ ಕಾರ್ಯಕ್ರಮ ನಡೆಯಲಿದ್ದು, ಏ.4 ರಂದು ಬೆಳಗ್ಗೆ 7.30ಕ್ಕೆ ಅಷ್ಟೋತ್ತರ, ಬೃಹತಿ ಸಹಸ್ರಯಾಗ ಅಂಗವಾಗಿ ಕಳಶ ಸ್ಥಾಪನೆ, ಸಂಸ್ಥಾನ ಪೂಜೆ, ಸಂಜೆ ರಾಮಾಯಣ ಕುರಿತಾದ ಪ್ರಶೋತ್ತರ ನಡೆಯಲಿದೆ.
ಏ.5 ರಂದು ಬೆಳಗ್ಗೆ ಅಷ್ಟೋತ್ತರ, ಬೃಹತಿ ಸಹಸ್ರಯಾಗದ ಹೋಮ, ಪೂರ್ಣಾಹುತಿ, ಸಂಸ್ಥಾನ ಪೂಜೆ ನಡೆಯಲಿದೆ.
ಸಂಜೆ ಚಕ್ರವರ್ತಿ ಸೂಲಿಬೆಲೆಯವರಿಂದ ಉಪನ್ಯಾಸ, ಮೈಸೂರು ರಾಮಾಚಂದ್ರಾಚಾರ ದಾಸವಾಣಿ ಕಾರ್ಯಕ್ರಮ ನಡೆಯಲಿದೆ.
ಏ.6 ರಂದು ಬೆಳಗ್ಗೆ ಅಷ್ಟೋತ್ತರ ನಂತರ ಧನ್ವಂತರಿ ಹೋಮ ಶ್ರೀಗಳ ಸಾಮೂಹಿಕ ಪಾದಪೂಜೆ, ಪೂರ್ಣಹುತಿ, ಸಂಸ್ಥಾನ ಪೂಜೆ ನಡೆಯಲಿದೆ. ಸಂಜೆ ಕ್ರಿಕೆಟಿಗ ವಿಜಯ ಭಾರದ್ವಾಜ್ ಹಾಗೂ ಕೇಂದ್ರ ಮಾಜಿ ಸಚಿವ ಬಸನಗೌಡ ಯತ್ನಾಳ ಭಾಗವಹಿಸಲಿದ್ದಾರೆ. ಶ್ರೀ ಸುಶಮೀಂದ್ರ ತೀರ್ಥರ ಪಾದುಕೆ ಗಜವಾಹನದಲ್ಲಿ ಮೆರವಣಿಗೆ ಗಾಂಧಿಚೌಕ ಶ್ರೀ ಹನುಮಾನ ಮಂದಿರದಿಂದ ಕರ್ನಾಟಕ ಸಂಘದವರೆಗೆ ನಡೆಯುತ್ತದೆ ಎಂದರು.
ಈ ಸಂದರ್ಭದಲ್ಲಿ ಪ್ರಮುಖರಾದ ರಾಮರಾವ್ ದೇಸಾಯಿ, ವೇಣುಗೋಪಾಲ ಇನಾಂಧಾರ, ವಿಷ್ಣುತೀರ್ಥ , ಪ್ರಾಣೇಶ ಆಚಾರ್ಯ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net