ಕಾಯಕ-ದಾಸೋಹ, ಶರಣರ ಶ್ರೇಷ್ಠತೆ ಮತ್ತು ಬಸವಣ್ಣನವರ ಮಹತ್ವವವನ್ನು ಸಾರುತ್ತವೆ. ತಮ್ಮನ್ನು ಮೊರದ ಹೊಲಿವ ಗವರ ಎಂದು ಹೇಳಿಕೊಂಡು, ಕಾಯಕವೇ ಕೈಲಾಸ ಎಂದು ಪ್ರತಿಪಾದಿಸಿ ಗುರು, ಲಿಂಗ, ಜಂಗಮ ಮತ್ತು ಅಷ್ಠಾವರಣಗಳ ಮಹತ್ವವನ್ನು ವಿವರಿಸಿದ್ದಾರೆ. ಅವರ ವಚನಗಳು ನಿಷ್ಠೆ, ಸತ್ಯ, ಶುದ್ಧ ಕಾಯಕ ಮತ್ತು ದಾಸೋಹದ ಜೀವನದರ್ಶನ ನೀಡುತ್ತವೆ. ಶಿವನಿಗಿಂತಲೂ ಶರಣರೇ ಶ್ರೇಷ್ಠ ಎಂದು ಹೇಳುತ್ತ ಬಸವಣ್ಣನವರನ್ನು ಪರದೈವವೆಂದು ಸ್ತುತಿಸಿದರು ಎಂದು ತಿಳಿಸಿದರು.