ಯುವಕರು ಅಧ್ಯಯನಕ್ಕೆ ಆದ್ಯತೆ ನೀಡಲಿ

ದೇವದುರ್ಗ ತಾಲೂಕು ಕೊಪ್ಪರದಲ್ಲಿ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕಸಾಪ ಜಿಲ್ಲಾಧ್ಯಕ್ಷ ರಂಗಣ್ಣ ಪಾಟೀಲ್ ಅಳ್ಳುಂಡಿಗೆ 25 ಸಾವಿರ ರೂ. ಚೆಕ್ಕನ್ನು ಬುಳ್ಳ ಕುಟುಂಬದವರು ನೀಡಿದರು. ತಾಲೂಕು ಅಧ್ಯಕ್ಷ ಎಚ್.ಶಿವರಾಜ, ಪ್ರಮುಖರಾದ ಬಸವರಾಜ ಪಾಟೀಲ್ ಇಟಗಿ, ಎ.ಮಲ್ಲಿಕಾರ್ಜುನ್ ಪಾಟಿಲ್, ಮಲ್ಲಣ್ಣ ಸಾಹುಕಾರ್, ಮಹಾದೇವಪ್ಪ ಇದ್ದರು.

Published on
ದೇವದುರ್ಗ: ಕನ್ನಡ ಸಾಹಿತ್ಯ ಪರಿಷತ್‌ಗೆ ಅಭಿಮಾನಿಗಳು ಜೀವಾಳವಾಗಿದ್ದರೆ ದತ್ತಿ ದಾನಿಗಳು ಆಧಾರಸ್ತಂಭ ಇದ್ದಂತೆ. ದಾನಿಗಳು ಹೆಚ್ಚಾದಂತೆಲ್ಲ ಕನ್ನಡದ ಕಹಳೆ ಎತ್ತರೆತ್ತರಕ್ಕೆ ಬೆಳೆಯಲಿದೆ ಎಂದು ಕಸಾಪ ಜಿಲ್ಲಾಧ್ಯಕ್ಷ ರಂಗಣ್ಣ ಪಾಟೀಲ್ ಅಳ್ಳುಂಡಿ ಹೇಳಿದರು.
ತಾಲೂಕಿನ ಕೊಪ್ಪರ ಗ್ರಾಮದಲ್ಲಿ ಕಸಾಪದಿಂದ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಹಾಗೂ ದತ್ತಿನಿಧಿ ಸ್ವೀಕಾರ ಸಮಾರಂಭದಲ್ಲಿ ಬುಧವಾರ ಮಾತನಾಡಿದರು. ಶತಮಾನಗಳ ಇತಿಹಾಸ ಹೊಂದಿರುವ ಕಸಾಪ ಬೆಳವಣಿಗೆಗೆ ದತ್ತಿದಾನಿಗಳೇ ಪ್ರಮುಖ ಕಾರಣ. ಜಿಲ್ಲೆ ಸೇರಿ ರಾಜ್ಯಾದ್ಯಂತ ದತ್ತಿದಾನಿಗಳ ಸಂಖ್ಯೆ ಹೆಚ್ಚುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ ಎಂದರು.
ವಚನ ಸಾಹಿತ್ಯವನ್ನು ಸಂರಕ್ಷಣೆ ಮಾಡಿದ ಡಾ.ಫ.ಗು.ಹಳಕಟ್ಟಿ ಜೀವನ ಚರಿತ್ರೆ ಹಾಗೂ ಅವರ ಕೊಡುಗೆ ಸ್ಮರಣೀಯ. ಅವರ ಆಶಯ ಇಟ್ಟುಕೊಂಡು ಲಿಂಗನಗೌಡ ಬುಳ್ಳ ಪ್ರಥಮ ಪುಣ್ಯಸ್ಮರಣೆ ನಿಮಿತ್ತ ಅವರ ಸುಪುತ್ರ ಬಸನಗೌಡ ಬುಳ್ಳ ಕನ್ನಡಪ್ರೇಮ ಮೆಚ್ಚುವಂಥದ್ದು. ದೇವದುರ್ಗ ತಾಲೂಕು ಸಾಹಿತ್ಯ ಬೀಡಾಗಿದ್ದು ಅಧ್ಯಯನಕ್ಕೆ ಯೋಗ್ಯ ಸ್ಥಳವಾಗಿದೆ. ಯುವಕರು ತಾಲೂಕು ಅಧ್ಯಯನಕ್ಕೆ ಆದ್ಯತೆ ನೀಡಬೇಕು ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net