800 ಕೆಪಿಎಸ್ ಶಾಲೆಗಳ ರದ್ದತಿಗೆ ಕರವೇ ಒತ್ತಾಯ

ರಾಜ್ಯ ಸರ್ಕಾರವು ಮುಂಬರುವ ಶೈಕ್ಷಣಿಕ ವರ್ಷ 2026-27ರಿಂದ ರಾಜ್ಯಾದ್ಯಂತ 800 ಕೆಪಿಎಸ್ ಶಾಲೆಗಳನ್ನು ಆರಂಭಿಸುವ ನಿರ್ಧಾರ ಕೈಗೊಂಡಿರುವುದನ್ನು ಖಂಡಿಸಿ ಬುಧವಾರ ಕರ್ನಾಟಕ ರಕ್ಷಣಾ ವೇದಿಕೆ ಶಿವರಾಮೇಗೌಡರ ಬಣ ಹಾಗು ಜಿಲ್ಲಾ ಕನ್ನಡ ಕ್ರಿಯಾ ಸಮಿತಿ ಹಾಗೂ ಕನ್ನಡ ಮಿತ್ರಕೂಟದ ವತಿಯಿಂದ ರಾಯಚೂರಿನ  ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ಮಾಡಿದರು. ಕರವೇ ಜಿಲ್ಲಾಧ್ಯಕ್ಷ ಅಶೋಕಕುಮಾರ ಜೈನ್, ಜಿಲ್ಲಾ ಕನ್ನಡ ಕ್ರಿಯಾ ಸಮಿತಿಯ ಅಧ್ಯಕ್ಷ ರಫೀಕ ಅಹ್ಮದ್, ರಾಮಲಿಂಗಪ್ಪ ಕುಣಸಿ, ನಿಜಾಮುದ್ದಿನ್, ರಾಮಣ್ಣ ಮ್ಯಾದಾರ, ಮಲ್ಲಿಕಾರ್ಜುನ, ಬಶೀರ್ ಅಹ್ಮದ್ ಹೊಸಮನಿ, ಆಸೀಫ್ , ಅಜೀಜ್, ರಾಮಣ್ಣ ಇದ್ದರು.

Published on
ರಾಯಚೂರು ರಾಜ್ಯ ಸರ್ಕಾರವು ಮುಂಬರುವ ಶೈಕ್ಷಣಿಕ ವರ್ಷ 2026-27ರಿಂದ ರಾಜ್ಯಾದ್ಯಂತ 800 ಕೆಪಿಎಸ್ ಶಾಲೆಗಳನ್ನು ಆರಂಭಿಸುವ ನಿರ್ಧಾರ ಕೈಗೊಂಡಿರುವುದನ್ನು ಖಂಡಿಸಿ ಬುಧವಾರ ಕರ್ನಾಟಕ ರಕ್ಷಣಾ ವೇದಿಕೆ ಶಿವರಾಮೇಗೌಡರ ಬಣ ಹಾಗು ಜಿಲ್ಲಾ ಕನ್ನಡ ಕ್ರಿಯಾ ಸಮಿತಿ ಹಾಗೂ ಕನ್ನಡ ಮಿತ್ರಕೂಟದ ವತಿಯಿಂದ ನಗರದ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ಮಾಡಿದರು.
ಈಗಾಗಲೇ ರಾಜ್ಯದಲ್ಲಿ ಕನ್ನಡ ಮಾದ್ಯಮ ಶಾಲೆಗಳು ಅಳಿವಿನ ಅಂಚಿನಲ್ಲಿದ್ದು, ವಿದ್ಯಾರ್ಥಿಗಳ ದಾಖಲಾತಿ ವರ್ಷದಿಂದ ವರ್ಷಕ್ಕೆ ಕುಸಿಯುತ್ತಿದೆ. ಇಂತಹ ಸಂದರ್ಭದಲ್ಲಿ ಸರ್ಕಾರ 800 ಕೆಪಿಎಸ್ ಶಾಲೆಗಳನ್ನು ಆರಂಭಿಸಲು ಮುಂದಾಗಿರುವುದು ಕನ್ನಡ ಮಾದ್ಯಮ ಶಾಲೆಗಳ ಉಳಿವಿಗೆ ದೊಡ್ಡ ಹೊಡೆತವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಕನ್ನಡವೇ ರಾಜ್ಯ ಭಾಷೆಯಾಗಿ ದ್ದು, ಗ್ರಾಮೀಣ ಭಾಗಗಳಲ್ಲಿ ಇಂದಿಗೂ ಕನ್ನಡ ಮಾದ್ಯಮ ಶಾಲೆಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ. ಆದರೆ ಸರ್ಕಾರದ ಈ ನಿರ್ಧಾರ ಮಾತೃಭಾಷೆಯಲ್ಲಿ ಶಿಕ್ಷಣ ನೀಡುವ ನೀತಿಗೆ ವಿರುದ್ಧವಾಗಿದ್ದು, ಕನ್ನಡ ಶಿಕ್ಷಣ ವ್ಯವಸ್ಥೆಯ ಮೇಲೆ ಕೊಡಲಿ ಪೆಟ್ಟು ಹಾಕಿದಂತಾಗಿದೆ ಎಂದು ಆರೋಪಿಸಿದರು.

ಸರ್ಕಾರ ತಕ್ಷಣವೇ 800 ಕೆಪಿಎಸ್ ಶಾಲೆಗಳ ಆರಂಭದ ನಿರ್ಧಾರವನ್ನು ಹಿಂಪಡೆದು, ಕನ್ನಡ ಮಾದ್ಯಮ ಶಾಲೆಗಳ ಬಲವರ್ಧನೆಗೆ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಕರವೇ ಜಿಲ್ಲಾಧ್ಯಕ್ಷ ಅಶೋಕಕುಮಾರ ಜೈನ್, ಜಿಲ್ಲಾ ಕನ್ನಡ ಕ್ರಿಯಾ ಸಮಿತಿಯ ಅಧ್ಯಕ್ಷ ರಫೀಕ ಅಹ್ಮದ್, ರಾಮಲಿಂಗಪ್ಪ ಕುಣಸಿ, ನಿಜಾಮುದ್ದಿನ್, ರಾಮಣ್ಣ ಮ್ಯಾದಾರ, ಮಲ್ಲಿಕಾರ್ಜುನ, ಬಶೀರ್ ಅಹ್ಮದ್ ಹೊಸಮನಿ, ಆಸೀಫ್ , ಅಜೀಜ್, ರಾಮಣ್ಣ , ರುದ್ರಯ್ಯ ಗುಣಾರಿ ಸೇರಿದಂತೆ ಅನೇಕರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net