_1781886242568.webp?w=480&auto=format%2Ccompress&fit=max)
_1781886242568.webp?w=480&auto=format%2Ccompress&fit=max)
ರಾಯಚೂರು. ಜಿಲ್ಲಾ ಕನ್ನಡ ಸೇನೆಯಿಂದ ಜೂ.18 ರಂದು ಬೆಳಗ್ಗೆ 10; 30ಕ್ಕೆ ನಗರದಲ್ಲಿ ಕನ್ನಡ ಜಾಗೃತಿ ಜಾಥಾವನ್ನು ಆಯೋಜನೆ ಮಾಡಲಾಗಿದೆಂದು ಸಂಘಟನೆ ಜಿಲ್ಲಾಧ್ಯಕ್ಷ ಎಂ.ಬಸವರಾಜ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಾಥವನ್ನು ಬೈಕ್ ರ‌್ಯಾಲಿ ಮೂಲಕ ಸಂಘಟನೆ ರಾಜ್ಯಾಧ್ಯಕ್ಷ ಕೆ.ಆರ್.ಕುಮಾರ ಹಾಗೂ ಚಲನಚಿತ್ರ ನಟ ಟೆನ್ನಿಸ್ ಕೃಷ್ಣ ಚಾಲನೆ ನೀಡಲಿದ್ದಾರೆ. ಕನ್ನಡ ಶಾಲೆಗಳನ್ನು ಉಳಿಸುವದು, ಗಡಿಭಾಗದ ಶಾಲೆಗಳ ಸಮಸ್ಯೆಗಳನ್ನು ನಿವಾರಿಸುವದು ಕನ್ನಡ ನಾಮಫಲಕ ಕಡ್ಡಾಯಗೊಳಿಸುವಂತೆ ಒತ್ತಾಯಿಸಿ ನಗರದ ವಿವಿಧ ರಸ್ತೆಗಳ ಮೂಲಕ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಮನವಿ ಸಲ್ಲಿಸಲಾಗುತ್ತದೆ. ಕನ್ನಡ ಅಭಿಮಾನಿಗಳು, ಆಸಕ್ತರು, ವಿವಿಧ ಸಂಘಟನೆಗಳು ಬೆಂಬಲಿಸಿ ಭಾಗವಹಿಸುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯಾಧ್ಯಕ್ಷ ಹನುಮೇಶ ನಾಯುಕ, ಉಪಾಧ್ಯಕ್ಷ ನಾಗಪ್ಪ, ಪ್ರಮುಖರಾದ ಗೋವಿಂದ ಚವ್ಹಾಣ, ಅಮರೇಶ ನಾಯಕ ಇದ್ದರು.