_1781886458408.webp?w=480&auto=format%2Ccompress&fit=max)
_1781886458408.webp?w=480&auto=format%2Ccompress&fit=max)
ರಾಯಚೂರು ರಾಗ ರಂಗ ಸಾಂಸ್ಕೃತಿಕ ವೇದಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಜೂ.16 ರಂದು ಸಂಜೆ 6 ಗಂಟೆಗೆ ನಗರದ ಸರ್ಕಾರಿ ನೌಕರರ ಮನೋರಂಜನಾ ಕೇಂದ್ರದಲ್ಲಿ ಸಾಂಸ್ಕೃತಿಕ ಕಲಾ ಸಂಗಮ ಸಂಗೀತ ಮತ್ತು ನೃತ್ಯ ಕಾರ್ಯಕ್ರಮ ಆಯೋಜಿಸಲಾಗಿದೆಂದು ವೇದಿಕೆಯ ಅಧ್ಯಕ್ಷ ಪಂಪಾಪತಿ ಹೂಗಾರ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾರ್ಯಕ್ರಮವನ್ನು ಹೂಗಾರ ಸಮಾಜದ ರಾಜ್ಯಾಧ್ಯಕ್ಷ ಬಸವರಾಜ ಹೂಗಾರ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಹೂಗಾರ ಸಮಾಜ ಗೌರವಾಧ್ಯಕ್ಷ ಉಗ್ರ ನರಸಿಂಹಪ್ಪ ಹೂಗಾರ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರಾದ ಉತ್ತರಾದೇವಿ ಮಠಪತಿ, ಜಿಲ್ಲಾ ಹೂಗಾರ ಸಮಾಜ ಅಧ್ಯಕ್ಷ ಈರಣ್ಣ ಹೂಗಾರ, ವಾಣಿಜ್ಯೋಧ್ಯಮಿ ವೀರೇಂದ್ರ ಪಾಟೀಲ್ ಹರವಿ, ಫಾತಿಮಾ ಹುಸೇನ, ನಿವೃತ್ತ ಪಶು ವೈಧ್ಯಾಧಿಕಾರಿ ಮಹಾದೇವಪ್ಪಪ, ಹಿರಿಯ ರಂಗಭೂಮಿ ಕಲಾವಿದೆ ಶಾಂತಾ ಕುಲ್ಕರ್ಣಿ, ಶರಣಪ್ಪ ಹೂಗಾರ ಗಾಣಧಾಳ ಸೇರಿ ಅನೇಕರು ಭಾಗವಹಿಸಲಿದ್ದಾರೆ. ಪ್ರತಿಭಾ ಗೋನಾಳದಿಂದ ಸುಗಮ ಸಂಗೀತ, ದೀಪಾ ಅವರಿಂದ ವಚನ ಗಾಯನ, ಶಾಂತಾ ಕುಲ್ಕರ್ಣಿಯವರಿಂದ ಭಕ್ತಿ, ಸಂಗೀತ, ವೆಂಕಟನರಸಿಂಹಲುರಿಂದ ತತ್ವಪದ ಗಾಯನ, ಎಂ.ನರೇಂದ್ರಕುಮಾರರಿಂದ ಭಾವಗೀತೆ, ಕೃಷ್ಣಪ್ಪ ತಂಡದಿಂದ ನೃತ್ತ, ವರ್ಷಾ ಮಡ್ಡಿ ಶಕ್ತಿನಗರದಿಂದ ಭರತ ನಾಟ್ಯ ಪ್ರದರ್ಶನವಾಗಲಿದೆ ಎಂದರು.
ಈ ಸಂದರ್ಭದಲ್ಲಿ ಪ್ರಮುಖರಾದ ರವಿಕುಮಾರ, ಚಂದ್ರಶೇಖರ, ಪವನಕುಮಾರ ಹೂಗಾರ ಇದ್ದರು.