ಸಿಂಧನೂರು ವಕೀಲರ ಸಂಘದ ಅಧ್ಯಕ್ಷರಾಗಿ ಆಯ್ಕೆಯಾದ ಕೆ.ಭೀಮನಗೌಡ ವಕೀಲಗೆ ಬೆಂಬಲಿಗರು ಹೂಮಾಲೆ ಹಾಕಿ ಸಂಭ್ರಮಿಸಿದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
160 ಮತಗಳ ಅಂತರದಿಂದ ಜಯ
ಉಪಾಧ್ಯಕ್ಷ ಕೆ.ಜಗದೀಶ, ಜಂಟಿ ಕಾರ್ಯದರ್ಶಿ ಹೀನಾ ಅಮ್ರೀನ್ ದೇಸಾಯಿ
ಸಿಂಧನೂರು: ವಕೀಲರ ಸಂಘಕ್ಕೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಕೆ.ಭೀಮನಗೌಡ, ಉಪಾಧ್ಯಕ್ಷರಾಗಿ ಕೆ.ಜಗದೀಶ, ಜಂಟಿ ಕಾರ್ಯದರ್ಶಿಯಾಗಿ ಹೀನಾ ಅಮ್ರೀನ್ ದೇಸಾಯಿ ಜಯಗಳಿಸಿದರು.
ಬೆಳಗ್ಗೆಯಿಂದ ಮಧ್ಯಾಹ್ನವರೆಗೆ ಮತದಾನ ಪ್ರಕ್ರಿಯೆ ನಡೆಯಿತು. ಒಟ್ಟು 294 ವಕೀಲರು ಮತದಾನ ಮಾಡಿದರು. ಬಳಿಕ ನಡೆದ ಮತ ಎಣಿಕೆ ಪ್ರಕ್ರಿಯೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಕೆ.ಭೀಮನಗೌಡಗೆ 227, ಪ್ರತಿಸ್ಪರ್ಧಿ ಪಂಪಣ್ಣ ಮೇಟಿಗೆ 67 ಮತಗಳು ಚಲಾವಣೆಯಾದವು. 160 ಮತಗಳ ಅಂತರದಿಂದ ಕೆ.ಭೀಮನಗೌಡ ಜಯಗಳಿಸಿದರು.
ಉಪಾಧ್ಯಕ್ಷ ಸ್ಥಾನ ಕೆ.ಜಗದೀಶ 146 ಮತ, ಸುರೇಶರೆಡ್ಡಿ 109, ಲಲಿತಾ ಚಲ್ಲಾ 40 ಮತ ಪಡೆದರು. 97 ಮತಗಳ ಅಂತರದಲ್ಲಿ ಕೆ.ಜಗದೀಶ ಜಯಭೇರಿ ಬಾರಿಸಿದರು.
ಜಂಟಿ ಕಾರ್ಯದರ್ಶಿ ಸ್ಥಾನಕ್ಕೆ ಸ್ಪರ್ಧಿಸಿದ್ದ ಹೀನಾ ಅಮ್ರೀನ್ ದೇಸಾಯಿ 168 ಮತ, ಗಿರಿಯಪ್ಪ 125 ಮತಗಳನ್ನು ಪಡೆದಿದ್ದು, 43 ಮತಗಳ ಅಂತರದಿಂದ ಹೀನಾ ಅಮ್ರೀನ್ ದೇಸಾಯಿ ಜಯಗಳಿಸಿದ್ದು, 1 ಮತ ತಿರಸ್ಕೃಗೊಂಡಿದೆ ಎಂದು ಚುನಾವಣಾಧಿಕಾರಿ ಕೆ.ಅಮರೇಗೌಡ ವಕೀಲರು ತಿಳಿಸಿದರು.