ಸರ್ಕಾರಿ ಪಿಯು ಕಾಲೇಜುಗಳಿಗೆ ಸೇರಿ

ಡಾ.ಎಸ್.ಶಿವರಾಜ
ಡಾ.ಎಸ್.ಶಿವರಾಜ
Published on
ಸಿಂಧನೂರು: ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ನಿರ್ದೇಶನದಂತೆ ಬಡ ಮತ್ತು ಮಧ್ಯಮ ವರ್ಗದವರು ಗುಣಮಟ್ಟದ ಶಿಕ್ಷಣಕ್ಕಾಗಿ ಸರ್ಕಾರಿ ಪಿಯು ಕಾಲೇಜುಗಳಲ್ಲಿ ಪ್ರವೇಶ ಪಡೆಯಬೇಕು ಎಂದು ಪ್ರಾಚಾರ್ಯ ಡಾ.ಎಸ್.ಶಿವರಾಜ ಮನವಿ ಮಾಡಿದರು. 
ನಗರದ ಪತ್ರಿಕಾ ಭವನದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ತಾಲೂಕಿನಲ್ಲಿ 8 ಸರ್ಕಾರಿ ಪದವಿ ಪೂರ್ವ ಕಾಲೇಜುಗಳಿದ್ದು, ಇಬ್ಬರು ಪ್ರಾಚಾರ್ಯರು ಹಾಗೂ 48 ಕಾಯಯಂ ಉಪನ್ಯಾಸಕರು ಇದ್ದಾರೆ. ಇನ್ನೂ 8 ಹುದ್ದೆಗಳು ಖಾಲಿಯಿವೆ. ಪ್ರಸ್ತುತ ಸಿಂಧನೂರು ನಗರದಲ್ಲಿ ಆದರ್ಶ ವಿಜ್ಞಾನ ಪದವಿ ಪೂರ್ವ ಕಾಲೇಜು ಮತ್ತು ತಿಡಿಗೋಳ ಗ್ರಾಮದಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜುಗಳು ಆರಂಭಗೊಂಡಿವೆ. 10 ಪಿಯು ಕಾಲೇಜುಗಳಿಗೆ ಸ್ವಂತ ಕಟ್ಟಡ, ಆಟದ ಮೈದಾನಗಳಿವೆ. ಎಸ್ಸಿ-ಎಸ್ಟಿ ವಿದ್ಯಾರ್ಥಿಗಳಿಗೆ 270 ರೂ., ಕಲಾ ಮತ್ತು ವಾಣಿಜ್ಯ ವಿದ್ಯಾರ್ಥಿಗಳಿಗೆ 811 ರೂ. ಹಾಗೂ ವಿಜ್ಞಾನ ವಿದ್ಯಾರ್ಥಿಗಳಿಗೆ 961 ರೂ. ಅತ್ಯಂತ ಕಡಿಮೆ ಶುಲ್ಕ ನಿಗದಿ ಪಡಿಸಲಾಗಿದೆ ಎಂದರು. 
ಪ್ರಾಚಾರ್ಯ ಶೇಖರಯ್ಯಸ್ವಾಮಿ ಮಾತನಾಡಿ, 2025-26ನೇ ಸಾಲಿನಲ್ಲಿ ಗೋನವಾರ ಸರ್ಕಾರಿ ಪದವಿ ಪೂರ್ವ ಕಾಲೇಜು ಶೇ.94, ತುರ್ವಿಹಾಳ ಕಾಲೇಜು ಶೇ.91, ಅಲಬನೂರು ಕಾಲೇಜು ಶೇ.89, ಜಾಲಿಹಾಳ ಕಾಲೇಜು ಶೇ.75, ಸಿಂಧನೂರಿನ ಬಾಲಕರ ಕಾಲೇಜು ಶೇ.72, ಬಾಲಕಿಯರ ಕಾಲೇಜು ಶೇ.62 ಫಲಿತಾಂಶ ಪಡೆದಿವೆ. ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ದಾಖಲಾತಿ ಆಂದೋಲನ ಆರಂಭವಾಗಿದೆ. ಕಡಿಮೆ ಶುಲ್ಕ, ಗುಣಮಟ್ಟದ ಶಿಕ್ಷಣ, ಅಗತ್ಯ ಸೌಕರ್ಯಕ್ಕಾಗಿ ಸರ್ಕಾರಿ ಕಾಲೇಜುಗಳಿಗೆ ಮಕ್ಕಳನ್ನು ಸೇರಿಸಿ ಎಂದು ಕೋರಿದರು. 
ಪ್ರಾಚಾರ್ಯರಾದ ಬಸಪ್ಪ ಕೆ.ಹೊಸಮನಿ, ಚನ್ನಬಸಮ್ಮ, ಉಪನ್ಯಾಸಕರಾದ ಡಾ.ಹುಸೇನಪ್ಪ ಅಮರಾಪುರ, ಹುಡಸಪ್ಪ ಹುಡಸೂರು, ಶಾಂತಿ, ಸಿದ್ದನಗೌಡ, ಬಸವರಾಜ ಯಲಬುರ್ಗಿ, ಶರಣಪ ್ಪ ಹೊಸಳ್ಳಿ, ಕಾಳಿಂಗ ರೆಡ್ಡಿ, ವೆಂಕಟೇಶ ಬುಕ್ಕನಹಟ್ಟಿ, ಶಿವರಾಜ ಗೋನಾಳ, ರವಿಕುಮಾರ ಇದ್ದರು. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net