ನಗರದ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ,ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಶಿಕ್ಷಕರ ನೇಮಕಾತಿ ನಡೆಸುವದಾಗಿ ಹೇಳುತ್ತಲೇ ಬಂದಿದ್ದಾರೆ ಹೊರತು ನೇಮಕಾತಿ ಪ್ರಕ್ರಿಯೆಗಳು ನಡೆಸುತ್ತಿಲ್ಲ. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಒಂದರಲ್ಲಿಯೇ 79,694 ಹುದ್ದೆಗಳು ಖಾಲಿಯಿವೆ. ಕಲ್ಯಾಣ ಕರ್ನಾಟಕ ಜಿಲ್ಲೆಗಳಲ್ಲಿಯೇ 22,595 ಶಿಕ್ಷಕರ ಹುದ್ದೆಗಳು ಖಾಲಿಯಿವೆ. 18,317 ಪ್ರಾಥಮಿಕ ಮತ್ತು 4228 ಪ್ರೌಢಶಾಲಾ ಶಿಕ್ಷಕರ ಹುದ್ದೆಗಳು ಖಾಲಿಯಿವೆ.
ಶಿಕ್ಷಕರೇ ಇಲ್ಲದೇ ದೇವದುರ್ಗ ತಾಲೂಕಿನ 105 ಶಾಲೆಗಳು ಅತಿಥಿ ಶಿಕ್ಷಕರ ಮೇಲೆ ನಡೆದಿವೆ. ಜೂನ್ ತಿಂಗಳಿನಿಂದ ಶೈಕ್ಷಣಿಕ ವರ್ಷ ಪ್ರಾರಂಭವಾಗಲಿದ್ದು, ಮತ್ತೆ ಅತಿಥಿ ಶಿಕ್ಷಕರ ನೇಮಕಾತಿ ನಡೆಸುದವಾಗಿ ಸರ್ಕಾರ ಹೇಳುತ್ತಿದೆ. ಶಿಕ್ಷಕರೇ ಇಲ್ಲದೇ ಗುಣಮಟ್ಟ ಶಿಕ್ಷಣ ನೀಡುವದಾಗಿ ಹೇಳುತ್ತಿರುವದು ವಂಚನೆಯಾಗಿದೆ. ಆದರಿಂದ ನಿರ್ಲಕ್ಷ್ಯ ವಿರುದ್ಧ ನಡೆಯಲಿರುವ ಹೋರಾಟದಲ್ಲಿ ನಿರುದ್ಯೋಗಿ ಪದವೀಧರರು ಭಾಗವಹಿಸುವಂತೆ ಮನವಿ ಮಾಡಿದರು.