ಅಧಿವೇಶನದಲ್ಲಿ ರೈತರ ಸಮಸ್ಯೆ ಪರಿಹಾರಿಸಲು ಜೆಡಿಎಸ್ ಒತ್ತಾಯ

protest
protest
Published on

ರಾಯಚೂರು

ಬೆಳಗಾವಿ ಅಧಿವೇಶದಲ್ಲಿ ರೈತರ ಸಮಸ್ಯೆಗಳನ್ನು ಚರ್ಚಿಸಿ ಸೂಕ್ತ ಪರಿಹಾರ ನೀಡಬೇಕೆಂದು ಒತ್ತಾಯಿಸಿ ಜೆಡಿಎಸ್ ಪಕ್ಷದ ಗ್ರಾಮಾಂತರ ಘಟಕದಿಂದ ಸೋಮವಾರ ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ ಮಾಡಿದರು.

ಪ್ರತಿಭಟನೆಯಲ್ಲಿ ಪಕ್ಷದ ಜಿಲ್ಲಾಧ್ಯಕ್ಷ ಎಂ.ವಿರೂಪಾಕ್ಷಿ ಮಾತನಾಡಿ, ಬೆಳಗಾವಿಯಲ್ಲಿ ಅಧಿವೇಶನ ನಡೆಸುತ್ತಿದ್ದು ಕೇವಲ ಉತ್ತರ ಕರ್ನಾಟಕ ಸಂಭವಿಸಿದ ವಿಷಯಗಳು ಚರ್ಚೆ ಮಾಡಬೇಕು. ಕಾಲಹರಣ ಮಾಡಬಾರದು, ಈ ಭಾಗದಲ್ಲಿ ಸಾಕಷ್ಟು ರೈತರ ಸಮಸ್ಯೆಗಳಿವೆ. ಇವುಗಳಿಗೆ ಪರಿಹಾರ ಕಂಡುಕೊ ಳ್ಳಬೇಕು. ರೈತರ ಎಲ್ಲಾ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಕಂಡುಕೊಳ್ಳಲು ಈಗಾಗಲೇ ಬೆಳೆದ ಬೆಳೆಗಳಿಗೆ ಬೆಂಬಲ ಬೆಲೆ, ಎರಡನೇ ಬೆಳೆಗೆ ನೀರು, ಎಲ್ಲಾ ಬೆಳೆಗಳಿಗೆ ಖರೀದಿ ಕೇಂದ್ರ ಆರಂಭಿಸಬೇಕು ಎಂದರು.

ಜೆಡಿಎಸ್‌ನ ಎಲ್ಲಾ ಶಾಸಕರಿಗೆ ಅಧಿವೇಶನದಲ್ಲಿ ರೈತರ ಸಮಸ್ಯೆಗಳನ್ನು ಧ್ವನಿ ಎತ್ತಬೇಕೆಂದು ಮಾಹಿತಿ ನೀಡಲಾಗಿದೆ. ಅಧಿವೇಶನದಲ್ಲಿ ಒಳಗಡೆ ಎಲ್ಲಾ ಶಾಸಕರು ಧ್ವನಿ ಎತ್ತಿದರೆ ಹೊರಗಡೆ ಜೆಡಿಎಸ್‌ನಿಂದ ಪ್ರತಿಭಟನೆ ನಡೆಸುವ ಮೂಲಕ ಸರ್ಕಾರಕ್ಕೆ ಆಗ್ರಹಿಸಲಾಗುತ್ತದೆ ಎಂದರು.
ಎಸ್ಟಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಸಣ್ಣ ನರಸಿಂಹ ನಾಯಕ ಮಾತನಾಡಿ, ರಾಜ್ಯದಲ್ಲಿ ರೈತರ ಸಮಸ್ಯೆಗಳಿಗೆ ಕಾಂಗ್ರೆಸ್ ಸರ್ಕಾರ ಸ್ಪಂದಿಸದೇ ಕೇವಲ ಕುರ್ಚಿ ಕಚ್ಚಾಟದಲ್ಲಿ ತೊಡಗಿದೆ. ರೈತರು ಬೆಳೆಗಳಿಗೆ ಸೂಕ್ತ ಬೆಂಬಲ ಬೆಲೆಇಲ್ಲ, ಹತ್ತಿ ಮಾರಾಟಕ್ಕೆ ಖರೀದಿ ಕೇಂದ್ರ ಆರಂಭಿಸದರೂ ಸಮರ್ಪಕವಾಗಿ ಖರೀದಿ ನಡೆಯುತ್ತಿಲ್ಲ, ರೈತ ಬೆಳೆದ ಹತ್ತಿ ಮಾರಾಟಕ್ಕೆ ವಾರಗಟ್ಟಲೇ ಕಾಯುವ ಸ್ಥಿತಿ ನಿರ್ಮಾಣವಾಗಿದೆ. ಬೆಳೆ ನಷ್ಟ ಅನುಭವಿಸಿದ ರೈತರಿಗೆ ಪರಿಹಾರ ಘೋಷಣೆ ಮಾಡಿದೆ ಇದುವರೆಗೂ ಯಾವೊಬ್ಬ ರೈತನ ಖಾತೆಗೆ ಹಣ ಜಮಾ ಮಾಡಿಲ್ಲವೆಂದು ದೂರಿದರು.ಸರ್ಕಾರ ಎರಡನೇ ಬೆಳೆಗೆ ನೀರು ಹರಿಸಬೇಕು. ಬೆಳೆ ನಷ್ಟ ಉಂಟಾದ ರೈತರಿಗೆ ಪ್ರತಿ ಎಕರೆಗೆ 25 ಸಾವಿರ ಪರಿಹಾರ ಒದಗಿಸಕೊಡಬೇಕು. ಅಧಿವೇಶನದಲ್ಲಿ ಉತ್ತರ ಕರ್ನಾಟಕ ಸಮಸ್ಯೆ ಗಳಿಗೆ ಸ್ಪಂದಿಸಿ ಪರಿಹಾರ ಕಲ್ಪಿಸಬೇಕೆಂದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯಧ್ಯಕ್ಷ ಎನ್. ಶಿವಶಂಕರ ವಕೀಲ,ರಾಜ್ಯ ಪ್ರಧಾನ ಕಾರ್ಯದರ್ಶಿ ಲಕ್ಷ್ಮಿಪತಿ ಗಾಣದಾಳ, ಪ್ರಧಾನ ಕಾರ್ಯದರ್ಶಿ ರಾಮಕೃಷ್ಣ, ಜಿಲ್ಲಾ ಹಿಂದುಳಿದ ಅಧ್ಯಕ್ಷ ಜಂಬುನಾಥ ಯಾದವ, ಗ್ರಾಮಾಂತರ ಅಧ್ಯಕ್ಷ ನಾಗರಾಜ್ ಗೌಡ, ಕಾರ್ಯಾಧ್ಯಕ್ಷ ಅಮರೇಶ ಪಾಟೀಲ ಆಶಾಪೂರ, ಪರಿಶಿಷ್ಟ ಘಟಕ ಅಧ್ಯಕ್ಷ ಹಂಪಯ್ಯ ನಾಯಕ್, ಜಿಲ್ಲಾ ಪರಿಶಿಷ್ಟ ಅಧ್ಯಕ್ಷ ನರಸಪ್ಪ ಆಶಾಪೂರ, ಮುಖಂಡರಾದ ಭೀಮರೆಡ್ಡಿ ಸರ್ಜಾಪೂರ, ಪಿ ರಾಜು, ದುಳ್ಯಯ್ಯ ನಾಯಕ, ತಿಮ್ಮಪ್ಪ ನಾಯಕ, ಈರಣ್ಣ ಯಾದವ ಸೇರಿ ಅನೇಕರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net