ಆ.10 ರಂದು ಜೈಲ್ ಭರೋ ಚಳುವಳಿ

ಕೆ.ಜಿ.ವೀರೇಶ
ಕೆ.ಜಿ.ವೀರೇಶ
Published on

ರಾಯಚೂರು

ಕ್ವಿಟ್ ಇಂಡಿಯಾ ಹೋರಾಟದ ಸ್ಮರಣಾರ್ಥ ನಿಮಿತ್ತ ಆ.10 ರಂದು ಸಂಯಕ್ತ ಹೋರಾಟ ಕರ್ನಾಟಕ ಮತ್ತು ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿಗಳ ವತಿಯಿಂದ ನಗರದಲ್ಲಿ ಬೃಹತ್ ಪ್ರತಿಭಟನೆ ಮತ್ತು ಜೈಲ್ ಭರೋ ಚಳುವಳಿ ನಡೆಸಲಾಗುತ್ತದೆಂದು ಸಮಿತಿಯ ಜಿಲ್ಲಾ ಸಂಚಾಲಕ ಕೆ.ಜಿ.ವೀರೇಶ ತಿಳಿಸಿದರು.

ನಗರದ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಬ್ರಿಟಿಷರೆ ದೇಶ ಬಿಟ್ಟುತೊಲಗಿ ಎಂದು ಹೋರಾಟ ನಡೆಸಲಾಗಿತ್ತು. ಆದರೀಗ ಕಾರ್ಪೊರೇಟ್ ನೀತಿಗಳು ಜಾರಿಗೊಳಿಸುತ್ತಿರುವ ವಿರುದ್ಧ ಕಾರ್ಪೊರೇಟ್‌ಗಳೇ ದೇಶ ಬಿಟ್ಟು ತೊಲಗಿ ಹೋರಾಟ ನಡೆಸಲಾಗುತ್ತಿದೆ. ಮಳೆ ಕೊರತೆಯಿಂದ ಬರಗಾಲ ಘೋಷಣೆ ಮಾಡಿ ರೈತರ ಸಾಲ ಮನ್ನಾ ಮಾಡಬೇಕು.

ಬಗರಹುಕುಂ ಸಾಗುವಳಿದಾರರಿಗೆ ಭೂಮಿ ಸಾಗುವಳಿ ಚೀಟಿ ನೀಡಬೇಕು ಎಂದು ಒತ್ತಾಯಿಸಿ ವಿವಿಧ ಸಂಘಟನೆಗಳೊಂದಿಗೆ ಸೇರಿ ಬೃಹತ್ ಪ್ರತಿಭಟನೆ ನಡೆಸಲಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ಪ್ರಮುಖರಾದ ಡಿ.ಎಸ್.ಶರಣಬಸವ, ಮಹೇಶ ಚಿಕಲಪರ್ವಿ, ಖಾಜಾ ಅಸ್ಲಂ , ಆಂಜನೇಯ್ಯ, ಸಂಗಯ್ಯ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net