ವಿಜಯೋತ್ಸವ ನೆನಪಲ್ಲಿ ಜೈಭೀಮ್ ಪಥಸಂಚಲನ

ಭೀಮಾ ಕೊರೇಗಾಂವ್ ವಿಜಯೋತ್ಸವ ನಿಮಿತ್ತ ವಿಜಯೋತ್ಸವ ಆಚರಣಾ ಸಮಿತಿ ವತಿಯಿಂದ ಸಿಂಧನೂರಿನಲ್ಲಿ  ಜೈಭೀಮ್ ರೆಜಿಮೆಂಟ್ ಪಥ ಸಂಚಲನ ನಡೆಯಿತು.
ಭೀಮಾ ಕೊರೇಗಾಂವ್ ವಿಜಯೋತ್ಸವ ನಿಮಿತ್ತ ವಿಜಯೋತ್ಸವ ಆಚರಣಾ ಸಮಿತಿ ವತಿಯಿಂದ ಸಿಂಧನೂರಿನಲ್ಲಿ ಜೈಭೀಮ್ ರೆಜಿಮೆಂಟ್ ಪಥ ಸಂಚಲನ ನಡೆಯಿತು.
Published on
ಸಿಂಧನೂರು: ಭೀಮಾ ಕೊರೇಗಾಂವ್ 208ನೇ ವಿಜಯೋತ್ಸವ ನಿಮಿತ್ತ ಭೀಮಾ ಕೊರೇಗಾಂವ್ ಯುದ್ಧ ವಿಜಯೋತ್ಸವ ಆಚರಣಾ ಸಮಿತಿ ವತಿಯಿಂದ ನಗರದ ಪ್ರಮುಖ ಬೀದಿಗಳಲ್ಲಿ ಗುರುವಾರ ಜೈಭೀಮ್ ರೆಜಿಮೆಂಟ್ ಪಥಸಂಚಲನ ನಡೆಸಲಾಯಿತು.
ಪಥ ಸಂಚಲನಕ್ಕೆ ಮಕ್ಕಳ ತಜ್ಞ ಡಾ.ಕೆ.ಶಿವರಾಜ ಚಾಲನೆ ನೀಡಿದರು. ನೂರಾರು ಕಾರ್ಯಕರ್ತರು ಜೈಭೀಮ್ ಘೋಷವಾಕ್ಯವುಳ್ಳ ನೀಲಿ ಧ್ವಜಗಳನ್ನು ಹಿಡಿದು ಭೀಮಾ ಕೊರೇಗಾಂವ್ ಹಾಗೂ ಡಾ.ಅಂಬೇಡ್ಕರ್ ಪರ ಘೋಷಣೆ ಕೂಗುತ್ತಾ ಗಾಂಧಿಸರ್ಕಲ್, ಕನಕದಾಸ ಸರ್ಕಲ್, ಕಿತ್ತೂರು ರಾಣಿ ಚನ್ನಮ್ಮ ಸರ್ಕಲ್ ಹಾಗೂ ಯಲ್ಲಮ್ಮ ಗುಡಿ ಮುಂಭಾಗದ ಹೆದ್ದಾರಿ ಮೂಲಕ ಪಿಡಬ್ಲುೃಡಿಕ್ಯಾಂಪ್‌ನ ಡಾ.ಬಿ.ಆರ್.ಅಂಬೇಡ್ಕರ್ ಸರ್ಕಲ್ ತಲುಪಿ ಮುಕ್ತಾಯಗೊಳಿಸಿದರು.
 ಪ್ರಮುಖರಾದ ಡಿ.ಎಚ್.ಪೂಜಾರ್, ಹಾರೂನ್‌ಪಾಷಾ, ನಾಗವೇಣಿ ಪಾಟೀಲ್, ಎಂ.ಗಂಗಾಧರ, ಎಂ.ಮರಿಯಪ್ಪ, ಅಮರೇಶ ಗಿರಿಜಾಲಿ, ಮೌನೇಶ ಜಾಲವಾಡಗಿ, ರಾಮಣ್ಣ ಗೋನ್ವಾರ, ಹನುಮಂತಪ್ಪ ಗೋಮರ್ಸಿ, ನಾಗವೇಣಿ ಪಾಟೀಲ್, ನಾರಾಯಣ ಬೆಳಗುರ್ಕಿ, ಶಂಕರ್ ಗುರಿಕಾರ, ನಿರುಪಾದಿ ಗೋಮರ್ಸಿ, ಹನುಮಂತಪ್ಪ ಹಂಪನಾಳ, ಉಮೇಶ ಸುಕಾಲಪೇಟೆ ಇತರರಿದ್ದರು.
ಫೋಟೊ1ಎಸ್‌ಎನ್‌ಡಿ-02
ಭೀಮಾ ಕೊರೇಗಾಂವ್ ವಿಜಯೋತ್ಸವ ನಿಮಿತ್ತ ವಿಜಯೋತ್ಸವ ಆಚರಣಾ ಸಮಿತಿ ವತಿಯಿಂದ ಸಿಂಧನೂರಿನಲ್ಲಿ  ಜೈಭೀಮ್ ರೆಜಿಮೆಂಟ್ ಪಥ ಸಂಚಲನ ನಡೆಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net