ಸಮಾಜಘಾತುಕರ ಬಗ್ಗೆ ಮಾಹಿತಿ ನೀಡಿದರೆ ಅನುಕೂಲ

ಗುರುಗುಂಟಾ ಪೊಲೀಸ್ ಠಾಣೆಯಲ್ಲಿ ಈದ್ ಮಿಲಾದ್ ಶಾಂತಿ ಸಭೆಯಲ್ಲಿ ಹಟ್ಟಿಚಿನ್ನದಗಣಿ ಪಿಐ ಮಹಾಂತೇಶ ಸಜ್ಜನ್ ಮಾತನಾಡಿದರು.
ಗುರುಗುಂಟಾ ಪೊಲೀಸ್ ಠಾಣೆಯಲ್ಲಿ ಈದ್ ಮಿಲಾದ್ ಶಾಂತಿ ಸಭೆಯಲ್ಲಿ ಹಟ್ಟಿಚಿನ್ನದಗಣಿ ಪಿಐ ಮಹಾಂತೇಶ ಸಜ್ಜನ್ ಮಾತನಾಡಿದರು.
Published on

ಗುರುಗುಂಟಾ: ಹಬ್ಬ-ಧರ್ಮಗಳು ಸಂಘರ್ಷಕ್ಕೆ ಕಾರಣವಾಗದೆ ಸೌಹಾರ್ದದ ಸಂಕೇತವಾಗಬೇಕು ಎಂದು ಪಿಐ ಮಹಾಂತೇಶ ಸಜ್ಜನ್ ಹೇಳಿದರು.

ಪೊಲೀಸ್ ಠಾಣೆಯಲ್ಲಿ ಈದ್ ಮಿಲಾದ್ ಅಂಗವಾಗಿ ಆಯೋಜಿಸಿದ್ದ ಶಾಂತಿ ಸಭೆಯಲ್ಲಿ ಸೋಮವಾರ ಮಾತನಾಡಿದರು. ಕಾನೂನು ಸುವ್ಯವಸ್ಥೆಗೆ ಭಂಗ ತರುವ ಪ್ರಯತ್ನದಲ್ಲಿರುವವರ ಕುರಿತು ಮುಂಚಿತವಾಗಿ ಮಾಹಿತಿ ನೀಡಿದರೆ ಅಂಥವರ ಮೇಲೆ ಕಣ್ಣಿಡಲು ಅನುಕೂಲವಾಗುತ್ತದೆ ಎಂದು ತಿಳಿಸಿದರು.

ಮುಖ್ಯಪೇದೆ ಧರಿಯಪ್ಪ, ಪ್ರಮುಖರಾದ ಹುಲುಗಪ್ಪ ನಾಯಕ, ಸೋಮಣ್ಣ ನೀರಿನೇರ್, ಬಸ್ಸಣ್ಣ, ಶಿವು ಕೆಂಪು, ಬಂದೇನವಾಜ್, ಬಾಷಾಸಾಬ್, ಗಂಗಪ್ಪ ಕಬ್ಬೇರ್, ಮೀರ್ ಅಲಿ, ಆನಂದ ತುರ್ವಿಹಾಳ್, ಪ್ರಭುಗೌಡ, ಬಾಬು ಲಖನ್, ಈಶಪ್ಪ ಕೆಂಪ, ಯಲ್ಲಪ್ಪ, ಮುತ್ತಣ್ಣ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net